ಗದಗ: ಶ್ರೀ ಪಂ.ಪಂಚಾಕ್ಷರಿ ಗವಾಯಿಗಳವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ( ಎ.ಪಿ.ಎಂ.ಸಿ ಯಾರ್ಡ್,) ಗದಗ, ದಲಾಲ ವರ್ತಕರ ಹಾಗೂ ಖರೀದಿದಾರರ ಸಂಘದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮೀಟಿ ವತಿಯಿಂದ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದ್ದು. ಏಳನೇ ದಿನವಾದ ಇಂದು ಶ್ರೀಡಾ. ಪಂ.ಪುಟ್ಟರಾಜ ಗವಾಯಿಗಳ 15ನೇ ಪುಣ್ಯ ಸ್ಮರಣೆ ಅಂಗವಾಗಿ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಚಾಲನೆ ನೀಡಿ ಅನ್ನ ದಾನವು ಎಲ್ಲಾ ದಾನ ಗಿಂತಲೂ ಶ್ರೇಷ್ಠ ದಾನವಾಗಿದೆ. ಶ್ರೀ ಡಾ.ಪಂ.ಪುಟ್ಟರಾಜ ಗುರುಗಳ ಪುಣ್ಯ ಸ್ಮರಣೆ ಅಂಗಾಗಿ ಏನು ನಿವೇಲ್ಲರೂ ನಿಮ್ಮ ಕಾಯಕದ ಜೊತೆಗೆ ಅನ್ನ ಸಂತರ್ಪಣೆ ಮಾಡುತ್ತಿರುವದು ಶ್ರೇಷ್ಠ ವಾದ ಕಾರ್ಯವಾಗಿದೆ. ಎಲ್ಲರೂ ಧರ್ಮ ದಿಂದ ನಡೆದರೆ ಬದುಕು ಬಂಗಾರವಾಗಲಿದೆ ಎಂದರು. ಈ ಸಂದರ್ಭದಲ್ಲಿ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿಯ ಅಧ್ಯಕ್ಷರು ಪದಾಧಿಕಾರಿಗಳು, ದಲಾಲ ವರ್ತಕರ ಸಂಘದ ಹಾಗೂ ಖರೀದಿದಾರರ ಸಂಘದ ಸರ್ವ ಸದಸ್ಯರು ಉಪಸ್ಥಿತಿತರಿದ್ದರು. ಸಾವಿರಾರು ಭಕ್ತರು ಮಹಾ ಪ್ರಸಾದ ಸ್ವೀಕರಿಸಿ ಪುನೀತರಾದರು.