ಬಾಗಲಕೋಟ-ನವನಗರದ ಸೇಕ್ಟರ್ ನಂ.45ರಲ್ಲಿ ಇರುವ ರಮಾತಾಯಿ ಸಮುದಾಯ ಭವನದಲ್ಲಿ ದಿ.4ರಂದು ಸಂಜೆ 6ಗಂಟೆಗೆ ಭೌದ್ದರ ಜೀವನ ಶೈಲಿ ಸಂಸ್ಕಾರ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನು ಗುಲಬುರ್ಗಾದ ಭಂತೆ ಅಮರ ಜ್ಯೋತಿ ಅವರು ನಡೆಸಿಕೊಡಲಿದ್ದಾರೆ. ದಿವ್ಯಸಾನಿದ್ಯವನ್ನು ನವನಗರದ ಎಪಿಎಂಸಿ ಬಳಿ ಇರುವ ಬೌದ್ಧ ವಿಹಾರದ ಭಂತೆ ಧಮ್ಮಪಾಲ ಅವರು ವಹಿಸಲಿದ್ದಾರೆ.
ಆರೋಗ್ಯ ನೆಮ್ಮದಿ ಜೀವನಕ್ಕಾಗಿ ಹಾಗೂ ಸಕಲ ಜಾತಿಯ ಮಾನವರೆಲ್ಲರೂಭಗವಾನ ಬುದ್ಧ ಡಾ.ಬಿ.ಆರ್.ಅಂಬೇಡ್ಕರ್ ಬೋಧಿಸಿದ ಸಿದ್ಧಾಂತ ಅನುಸರಿಸಲೆಬೇಕು. ಅವರ ಬದುಕಿನ ಜೀವನ ಶೈಲಿಯ ಸಂಸ್ಕಾರ ವಿಧಿ ವಿಧಾನ ಅನುಸರಿಸಿ ಹಾಗೂ ಶುದ್ಧ ಜೀವನ ಆಚರಿಸಲು ಜನರು ಹೆಚ್ಚಿ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳಬೇಕೆಂದು ಚಲವಾದಿ ಸಮಾಜದ ಮುಖಂಡರಾದ ಬಸವರಾಜ ಹಿರೇಮನಿ,ಜೈಭೀಮ್, ಗುರುಶಾಂತಪ್ಪ ಮದೀನಕರ,ಹನಮಂತ ಹೊದ್ಲುರ,ಗೋಪಾಲ ನಾರಾಯಣಿ,ಫಕೀರಪ್ಪ ಬಂಡಿ,ಶಂಕರ ಹಿರೇಮನಿ,ಯಮನಪ್ಪ ಹಿರೇಮನಿ ಮೊದಲಾದವರು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ವಿನಂತಿಸಿದರು.