ಹುಕ್ಕೇರಿ: ಮುಂಬರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಹುಕ್ಕೇರಿಯಿಂದ ಶ್ರೀ ರಾಜೇಂದ್ರ ಪಾಟೀಲ್ ಅವರನ್ನು ಸಚಿವರ ಮಾರ್ಗದರ್ಶನದಲ್ಲಿ ಶ್ರೀ ಬಾಲಚಂದ್ರ ಜಾರಕಿಹೊಳಿ, ಶ್ರೀ ಸತೀಶ್ ಜಾರಕಿಹೊಳಿ ಹಾಗೂ ಶ್ರೀ ಅನ್ನಾಸಾಹೇಬ್ ಜೊಲ್ಲೆ ಅವರ ಬಣದಿಂದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ರಾಜೇಂದ್ರ ಪಾಟೀಲ್ ಅವರು, “ಪಕ್ಷಭೇದ ಮರೆತು ಸಹಕಾರಿ ಕ್ಷೇತ್ರಕ್ಕೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಹುಕ್ಕೇರಿ ತಾಲೂಕಿನ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿದ್ದು ಹೆಮ್ಮೆಯ ಸಂಗತಿ. ಜನರ ಮಾರ್ಗದರ್ಶನ ಹಾಗೂ ಹಿರಿಯರ ಆಶೀರ್ವಾದದಿಂದ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ” ಎಂದು ಹೇಳಿದರು.
ಹುಕ್ಕೇರಿ ತಾಲೂಕಿನ PKPS ಸಂಘಟನೆಯ ಪದಾಧಿಕಾರಿಗಳು ತಮ್ಮ ತಮ್ಮ ಗ್ರಾಮಗಳಲ್ಲಿ ಸಭೆಗಳನ್ನು ಜರುಗಿಸಿ ಶ್ರೀ ರಾಜೇಂದ್ರ ಪಾಟೀಲ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲು ಬಯಸಿದ್ದಾರೆ.
ಈ ಸಂದರ್ಭದಲ್ಲಿ ಸಂಗಮ ಶುಗರ್ಸ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣಾ ಅಭ್ಯರ್ಥಿಯಾದ ಶ್ರೀ ರಾಜೇಂದ್ರ ಪಾಟೀಲ್ ಅವರೊಂದಿಗೆ, ಶ್ರೀ ಶಶಿಕಾಂತ್ ನಾಯಕ್, ಶ್ರೀ ಅಮರ್ ನಲವಡೇ, ಶ್ರೀ ಸಂಜು ಶಿರಕೋಳಿ, ಶ್ರೀ ಗುರು ಪಾಟೀಲ್, ಕುಮಾರ್ ರಿಷಬ್ ಪಾಟೀಲ್, ಶ್ರೀ ಇಮ್ರಾನ್ ಮೋಮಿನ, ಶ್ರೀ ಶ್ರೀಕಾಂತ್ ಹತುನೂರೇ, ಶ್ರೀ ಅಜಿತ್ ಕರಜಿಗಿ, ಶ್ರೀ ಭೀಮಣ್ಣಾ ರಾಮಗೋನಟ್ಟಿ, ಶ್ರೀ ರವಿ ಕರಾಳೆ, ಶ್ರೀ ಕಿರಣ್ ರಜಪೂತ, ಶ್ರೀ ಭೀಮಗೌಡ ಅಮ್ಮನಗಿ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.