ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ಶಾರದಹಳ್ಳಿ ಹಾಗೂ ಐಕೂರಿನ ಮಾತೋಶ್ರೀ ಗಂಗಮ್ಮ ಗಂ. ದಿ.ಸೂಗಣ್ಣ ಸಾಹು ವಾರದ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಗಳ ಸಹಯೋಗದಡಿ ಪರಿಸರವನ್ನು ಉಳಿಸಿ ಬೆಳೆಸುವ ನೂತನ ಪರಿಕಲ್ಪನೆಯ “ಹಸಿರು ಭೂಮಿ ಆಂದೋಲನ” ದ ಆರನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ. ಸದಸ್ಯರಾದ ವಾಸುದೇವ ಎಂ. ವಿಶ್ವಕರ್ಮ ಮಾತನಾಡಿ, ದೇಶವು ಪ್ರಸ್ತುತ ಅಭಿವೃದ್ಧಿಯತ್ತ ಸಾಗುತ್ತಿರುವ ದಿನಗಳಲ್ಲಿ ಕೈಗಾರಿಕೋದ್ಯಮಗಳಿಗಾಗಿ ಭೂಮಿಯ ಬಳಕೆಯಾಗುವುದರಿಂದ ಪರಿಸರವು ಕ್ಷೀಣಿಸುತ್ತಿದೆ, ಆದ್ದರಿಂದ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಪರಿಸರದ ಬಗ್ಗೆ ಕಾಳಜಿ ಬರಬೇಕು. ಪ್ರತಿಯೊಂದು ಮನೆಗಳ ಮುಂದೆ ಗಿಡಗಳನ್ನು ನೆಡಬೇಕು, ಆ ನಿಟ್ಟಿನಲ್ಲಿ “ಹಸಿರು ಭೂಮಿ ಆಂದೋಲನ” ಕಾರ್ಯಕ್ರಮವು ಸಾರ್ವಜನಿಕರಿಗೆ ಪ್ರೇರಣೆಯಾಗಿದೆ ಎಂದರು.
ನಂತರ ಸಂಸ್ಥೆಗಳ ವತಿಯಿಂದ ದೇವಸ್ಥಾನದ ಅವರಣದಲ್ಲಿ ಮತ್ತು ಜಗದ್ಗುರು ಶ್ರೀ ಮೌನೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಉಭಯ ಸಂಸ್ಥೆಗಳ ಅಧ್ಯಕ್ಷರುಗಳಾದ ಸಂತೋಷ ಎಂ. ಆಚಾರ್ಯ ಶಾರದಹಳ್ಳಿ ಮತ್ತು ಮಹೇಶ ಎಸ್. ವಾರದ, ಸಗರ ಗ್ರಾಮದ ಹಿರಿಯರಾದ ನಾಗಪ್ಪ ಬಡಿಗೇರ, ಬಲವಂತಪ್ಪ ವಠಾರ, ಗ್ರಾಮಸ್ಥರಾದ ವಿನೋದ ದೇವರಗುಡಿ, ದೇವಿಂದ್ರ ದೇವರಗುಡಿ, ಪ್ರಕಾಶ ಯಡ್ರಾಮಿ, ಮಹೇಶ ಬಿ. ವಠಾರ, ಮೌನೇಶ ಸಂದಿಮನಿ, ವಿರುಪಾಕ್ಷ ವಿಶ್ವಕರ್ಮ, ಕಾಳಪ್ಪ ಸಿದ್ದಣ್ಣೋರ, ಈರಣ್ಣ ಎನ್. ಬಡಿಗೇರ, ಡಾ|| ಪ್ರಶಾಂತ ಪ್ರತಿಹಸ್ತ, ಮಾನಪ್ಪ ಎಂ. ಕಂಬಾರ, ಮಾನಪ್ಪ ಎಂ. ವಿಶ್ವಕರ್ಮ, ವಿಶ್ವನಾಥ ಪ್ರತಿಹಸ್ತ, ನಿಂಗರೆಡ್ಡಿ ಕೆ. ದೇವಿಕೇರಿ, ಭೀಮಣ್ಣ ಡಿ. ವಿಶ್ವಕರ್ಮ, ಮಲ್ಲಿಕಾರ್ಜುನ ಎಂ. ಬಿರಾದಾರ, ನಿಂಗು ಎಂ. ವಿಶ್ವಕರ್ಮ, ನಿಂಗರಾಜ ಹಯ್ಯಾಳ, ಬಾಲರಾಜ ಎಂ. ವಿಶ್ವಕರ್ಮ ಅರಳಗುಂಡಗಿ, ಸಮೃದ್ಧ ಎಸ್. ಆಚಾರ್ಯ ಇತರರು ಉಪಸ್ಥಿತರಿದ್ದರು.