ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮರು ನಾಮಕರಣ!

Ravi Talawar
ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮರು ನಾಮಕರಣ!
WhatsApp Group Join Now
Telegram Group Join Now

ಹುಬ್ಬಳ್ಳಿ, ಸೆಪ್ಟೆಂಬರ್ 2: ಹುಬ್ಬಳ್ಳಿ ಈದ್ಗಾ ಮೈದಾನ  ವಿವಾದ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಗೋಲಿಬಾರ್​ನಲ್ಲಿ ಅನೇಕರ ಜೀವ ಹೋಗಿತ್ತು. ಇದೀಗ ಮತ್ತೆ ಇದೇ ಮೈದಾನದ ವಿಚಾರದಲ್ಲಿ ಮತ್ತೊಂದು ವಿವಾದ ಆರಂಭವಾಗಿದೆ. ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಮರು ನಾಮಕರಣ ಮಾಡಲು ಬಿಜೆಪಿ ನೇತೃತ್ವದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ. ಆದರೆ, ಇದಕ್ಕೆ ಮುಸ್ಲಿಂ ಸಮುದಾಯದವರು ಸೇರಿದಂತೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೆಸರು ಬದಲಾವಣೆ ವಿವಾದ ಹುಬ್ಬಳ್ಳಿಯಲ್ಲಿ ಮತ್ತೊಂದು ಸುತ್ತಿನ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಕರ್ನಾಟಕದ ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ ನಗರದಲ್ಲಿರುವ ಈದ್ಗಾ ಮೈದಾನಕ್ಕೆ ದೊಡ್ಡ ಇತಿಹಾಸವಿದೆ. ನಗರದ ಹೃದಯಬಾಗದಲ್ಲಿರುವ 1.5 ಎಕರೆ ವಿಸ್ತೀರ್ಣದ ಈ ಜಾಗ ವಿವಾದಿತ ಸ್ಥಳವಾಗಿದ್ದು, ಈ ಮೈದಾನದ ಸುತ್ತಲೇ ಹತ್ತಾರು ಹೋರಾಟಗಳು ದಶಕಗಳ ಹಿಂದೆಯೇ ನಡೆದಿವೆ. ಮೈದಾನದ ಪರ ವಿರೋಧ ಹೋರಾಟಗಳು ರಾಷ್ಟ್ರ ಮಟ್ಟದಲ್ಲಿಯೇ ಸದ್ದಾಗಿದ್ದವು.

WhatsApp Group Join Now
Telegram Group Join Now
Share This Article