ಬಳ್ಳಾರಿ02.. : ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ ) ಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಇವರ ಆದೇಶದ ಮೇರೆಗೆ, ರಾಜ್ಯ ಸಂಚಾಲಕರಾದ ಅದ್ದಿಗೇರಿ ರಾಮಣ್ಣ ಮತ್ತು ಇತರ ಪದಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾ ಕಾರ್ಮಿಕ ಘಟಕದ ಜಿಲ್ಲಾ ಸಂಚಾಲಕರನ್ನಾಗಿ ಅಬ್ದುಲ್ ರೆಹಮಾನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ವಿ ಹೆಚ್ ಹುಲುಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಬ್ದುಲ್ ರೆಹಮಾನ್ ಅವರ ನಾಡ-ಪ್ರೇಮ ಕನ್ನಡ ನಾಡು-ನುಡಿ, ನೆಲ-ಜಲದ ಬಗ್ಗೆ ಹೊಂದಿರುವ ಅಭಿಮಾನ ಮತ್ತು ಅವರ ವೈಯಕ್ತಿಕವಾದ , ಉತ್ತಮ ಚಾರಿತ್ರ್ಯದ ಗುಣಗಳನ್ನು, ಪ್ರಾಮಾಣಿಕ ಕನ್ನಡ ಪರ ಕಾಳಜಿಯನ್ನು ಪರಿಗಣಿಸಿ ಅವರನ್ನು ಬಳ್ಳಾರಿ ಜಿಲ್ಲೆಯ ಕಾರ್ಮಿಕ ಘಟಕದ ಜಿಲ್ಲಾ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಮುಂದೆ ತಾವುಗಳು ಪ್ರಾಮಾಣಿಕವಾಗಿ ವೇದಿಕೆಯ ಕೆಲಸವನ್ನು ನಿರ್ವಹಿಸುತ್ತಾ ನಿಯಮ ನಿಬಂಧನೆಗಳೊಂದಿಗೆ ರೈತರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿಗಳಹಾಗೂ ಸಮಗ್ರ ನಾಡಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ನಾಡಿನ ಸರ್ವತೋಮುಖ
ಅಭಿವೃದ್ಧಿಗೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ತತ್ವಸಿದ್ಧಾಂತಗಳಿಗೆ ಬದ್ಧರಾಗಿ ತಾಯಿ ಭುವನೇಶ್ವರಿ ಸೇವೆ ಮಾಡಬೇಕೆಂದು ಜಿಲ್ಲಾಧ್ಯಕ್ಷ ಹುಲುಗಪ್ಪ ರಾಜ್ಯ ಸಂಚಾಲಕ ಅದ್ದಿಗೇರಿ ರಾಮಣ್ಣ ಸೂಚಿಸಿದರು.