ಕ್ರೀಡಾ ದಿನ ಆತ್ಮವನ್ನು ಗೌರವಿಸುವ ದಿನ : ಡಾ. ಬಿ. ಆರ್. ಪಟಗುಂದಿ

Ravi Talawar
ಕ್ರೀಡಾ ದಿನ ಆತ್ಮವನ್ನು ಗೌರವಿಸುವ ದಿನ : ಡಾ. ಬಿ. ಆರ್. ಪಟಗುಂದಿ
WhatsApp Group Join Now
Telegram Group Join Now
ಬೆಳಗಾವಿ: ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ತಂಡ ಕಾರ್ಯ, ಆರೋಗ್ಯದ ಅರಿವು ಮೂಡಿಸಲು ರಾಷ್ಟ್ರೀಯ ಕ್ರೀಡಾ ದಿನ ಸಹಕಾರಿಯಾಗಿದೆ. ಕ್ರೀಡಾ ದಿನ ಏಕತೆ ಮತ್ತು ಶ್ರೇಷ್ಠತೆಯ ಸ್ಫೂರ್ತಿಗೆ ಸಮರ್ಪಿತವಾಗಿದ್ದು,ಇದು ಆತ್ಮವನ್ನು ಗೌರವಿಸುವ ದಿನವಾಗಿದೆ ಎಂದು ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್. ಪಟಗುಂದಿ ಅಭಿಪ್ರಾಯಪಟ್ಟರು. ಅವರು ಇಂದು ಹಾಕಿ ಜಾದುಗಾರರಾಗಿದ್ದ ಮೇಜರ್ ಧ್ಯಾನ್ ಚಂದ  ಅವರ ಜನ್ಮದಿನದ ಅಂಗವಾಗಿ ನಗರದ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.

ಕಾಲೇಜಿನ ಅಕಾಡೆಮಿಕ್ ಡೀನ್ ಡಾ. ಅಶೋಕ ಹುಲಗಬಾಳಿ, ಕ್ರೀಡಾ ನಿರ್ದೇಶಕ  ಶ್ರೀಧರ ನೇಮಗೌಡ, ಕ್ರೀಡಾ ಸಂಯೋಜಕ ಆನಂದ ಬಂಕದ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article