ಬಳ್ಳಾರಿ: 01ನಗರದ ಕೌಲ್ ಬಜಾರ್ ಪ್ರದೇಶದ ಬಂಡಿ ಹಟ್ಟಿ ಮೈದಾನದಲ್ಲಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಜರುಗಿತು. ಈ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾನಗರ ಪಾಲಿಕೆ ಸದಸ್ಯ ಎನ್. ಎಂ. ಡಿ. ಆಸೀಫ್ ಬಾಷಾ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆಯ ಸಂಘದ ಜಿಲ್ಲಾಧ್ಯಕ್ಷ ಸಿ ಲಿಂಗಪ್ಪ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಧ್ವಜಾರೋಹಣ ನಡೆಸಿದರು
ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಉತ್ಸಾಹಭರಿತವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಕ್ರೀಡಾ ಕೌಶಲ್ಯಗಳನ್ನು ಬೆಳೆಸಲು ಇಂತಹ ವೇದಿಕೆಗಳು ಮಹತ್ವದ್ದೆಂದು ಕಾರ್ಯಕ್ರಮದಲ್ಲಿ ಒತ್ತಿ ಹೇಳಲಾಯಿತು.
ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಶಿಕ್ಷಕರು, ಪೋಷಕರು ಹಾಗೂ ಸ್ಥಳೀಯ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಮಕ್ಕಳನ್ನು ಪ್ರೋತ್ಸಾಹಿಸಿದರು. ಪಾಲಿಕೆ ಸದಸ್ಯ ಎನ್. ಎಂ. ಡಿ. ಆಸೀಫ್ ಬಾಷಾ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, “ಕ್ರೀಡೆ ಜೀವನದಲ್ಲಿ ಶಿಸ್ತು, ಸಹನೆ ಮತ್ತು ಆರೋಗ್ಯವನ್ನು ಬೆಳೆಸುವ ಮಹತ್ವದ ಸಾಧನ. ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ತಮ್ಮ ಭವಿಷ್ಯವನ್ನು ಬೆಳಗಿಸಬೇಕು” ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಅನುದಾನ ಶಾಲೆಯ ಶಿಕ್ಷಕರ ಸಂಘದ ರಾಜ್ಯ ಗೌರವ ಅಧ್ಯಕ್ಷ ಕೆ ಹನುಮಂತಪ್ಪ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಿ, ತಾಲೂಕು ಅಧ್ಯಕ್ಷ ಜಗದೀಶ್, ಗವಿಸಿದ್ದಪ್ಪ, ಮಾರಣ್ಣ, ಟಿ ಪಿ ಓ ಪದ್ಮಾರೆಡ್ಡಿ, ವೀರನಗೌಡ ಭೀಮಣ್ಣ ಸೇರಿದಂತೆ, ಹಲವಾರು ಶಾಲಾ ಮಕ್ಕಳು ಸೇರಿದಂತೆ, ಸಾರ್ವಜನಿಕರು ಪೋಷಕರು ಉಪಸ್ಥಿತರಿದ್ದರು.