ಪೌಷ್ಟಿಕ ಆಹಾರ ಮಾಹಿತಿ ಶಿಬಿರ

Ravi Talawar
ಪೌಷ್ಟಿಕ ಆಹಾರ ಮಾಹಿತಿ ಶಿಬಿರ
WhatsApp Group Join Now
Telegram Group Join Now
ಬೆಳವಡಿ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೈಲಹೊಂಗಲ ತಾಲೂಕಿನ ತುರಕರ ಸೀಗೇಹಳ್ಳಿ ಗ್ರಾಮದಲ್ಲಿ  ಕನ್ನಡಾಂಬೆ  ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ  ಮಾಹಿತಿ ಕಾರ್ಯಕ್ರಮ  ಆಯೋಜಿಸಲಾಯಿತು..
   ಕಾರ್ಯಕ್ರಮದ ಉದ್ಘಾಟನೆಯನ್ನು  ಗ್ರಾಮ ಪಂಚಾಯಿತಿ  ಅಧ್ಯಕ್ಷರಾದ ಶ್ರೀಮತಿ ಚೆನ್ನವ್ವ ಯಕ್ಕುನಿ  ಯೋಜನಾಧಿಕಾರಿಗಳಾದ ವಿಜಯಕುಮಾರ್ ಸರ್ ಸರಕಾರಿ ಪ್ರೌಢ  ಶಾಲೆಯ ಶಿಕ್ಷಕರಾದ  ಶಂಕರ್ ಕುಂಬಾರ,   ಗಿರಿ ಮಲ್ಲೇಶ್ವರ, ಕಮಿಟಿ ಸದಸ್ಯರಾದ ಮಲ್ಲೇಶಪ್ಪ ಕಂಬಳಿ ತಾಲೂಕಿನ ಜ್ಞಾನವಿಕಾಸಸಮನ್ವೇಧಿಕಾರಿ ಶೈಲಾ ಜಕ್ಕನವರ   ವಲಯದ ಮೇಲ್ವಿಚಾರಕರಾದ ಪರಶುರಾಮ್  ಒಕ್ಕೂಟದ ಅಧ್ಯಕ್ಷರಾದ ಮಹಾದೇವಿ ನರಗಟ್ಟಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
   ಸರಕಾರಿ ಪ್ರೌಢಶಾಲೆ ಶಿಕ್ಷಕರಾದ   ಶಂಕರ ಕುಂಬಾರ ಮಾತನಾಡಿ   ಪೌಷ್ಟಿಕ ಆಹಾರ ಸೇವನೆ, ಸಿರಿಧಾನ್ಯಗಳ ಬಳಕೆ, ಸಿರಿಧಾನ್ಯಗಳನ್ನು ಉಪಯೋಗಿಸುವುದರಿಂದ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.*ಪೌಷ್ಟಿಕ ಆಹಾರ ಸೇವನೆ, ನಿತ್ಯ ಜೀವನದಲ್ಲಿ ಸಿರಿಧಾನ್ಯ  ಹಸಿರು ತರಕಾರಿ ಸೊಪ್ಪು ಇದರಲ್ಲಿ ಸಿಗುವಂತ ವಿಟಮಿನ್  ಪೌಷ್ಠಿಕವಾಗಿ, ಪರಿಸರ ಮತ್ತು ನೈತಿಕವಾಗಿ ಒಳ್ಳೆಯದು. ಸಿರಿಧಾನ್ಯಗಳ ವಿಧಗಳು, ಅವುಗಳಿಂದ ಆರೋಗ್ಯಕ್ಕೆ ಇರುವ ಪ್ರಯೋಜನಗಳ ಬಗ್ಗೆ ಗರ್ಭಿಣಿಯರಿಗೆ ವಯಸ್ಕರರಿಗೆ  ವೃದ್ಧರಿಗೆ ಬಳಕೆ ಮಾಡುವ ಸಿರಿಧಾನ್ಯವು ಪೌಷ್ಟಿಕಾಂಶದ ಧಾನ್ಯಗಳಲ್ಲಿ ಒಂದಾಗಿದೆ, ಏಕೆಂದರೆ ಇದು ಕಬ್ಬಿಣ, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಆಹಾರದ ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಫೋಲೇಟ್ – ಗರ್ಭಾವಸ್ಥೆಯಲ್ಲಿ ಹೆಚ್ಚು ಅಗತ್ಯವಿರುವ ಎಲ್ಲಾ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದರ ಹೆಚ್ಚಿನ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ ಎಂದು ಮಾಹಿತಿ ನೀಡಿದರು.*
 ತಾಲೂಕಾ  ಯೋಜನಾಧಿಕಾರಿಳಾದ ವಿಜಯಕುಮಾರ  ಪೌಷ್ಟಿಕ ಆಹಾರ ಕುರಿತು ತರಕಾರಿ ಕಾಳುಗಳು ಮತ್ತು ಉತ್ತಮ ಆಹಾರ ಬಳಕೆ ಯೋಜನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಜ್ಞಾನವಿಕಾಸದ್ಲಲಿ ಸಿಗುವ ಸೌಲಭ್ಯ ಪಡೆದುಕೊಳ್ಳುವ ಬಗ್ಗೆ ತಿಳಿಸಿದರು ಪೌಷ್ಟಿಕಾಂಶ ಇರುವ ವಿಟಮಿನ್ ಬರಿತಾ ಪದಾರ್ಥಗಳ ಸೇವನೆ ಮಾಡಲು ಸಲಹೆ ನೀಡಿದರು.
 *ಕಾರ್ಯಕ್ರಮದ ನಿರೂಪಣೆ ಮಂಜುಳಾ  ಹಿರೇಮಠ,,ಸ್ವಾಗತ ಮಹಾದೇವಿ ಕುರಿ,ವಂದನೆಯನ್ನು ಸೇವಾ ಪ್ರತಿನಿಧಿ  ಸವಿತಾ  ನೆರವೇರಿಸಿದರು.    ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article