ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದಿಂದ  ಗೌರಿ ಗಣೇಶ ಹಬ್ಬದ ಪ್ರಯುಕ್ತ  ರಂಗೋಲಿ ಸ್ಪರ್ಧೆ

Ravi Talawar
ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದಿಂದ  ಗೌರಿ ಗಣೇಶ ಹಬ್ಬದ ಪ್ರಯುಕ್ತ  ರಂಗೋಲಿ ಸ್ಪರ್ಧೆ
WhatsApp Group Join Now
Telegram Group Join Now
ಕೊಪ್ಪಳ ಆಗಸ್ಟ್ 30, ತಾಲೂಕಿನ ಕಿನ್ನಾಳ ಗ್ರಾಮದ ಕನಕದಾಸ ವೃತ್ತದ ಬಳಿ ಹೊಸಮನಿ ಕ್ರಾಸ್ ಹತ್ತಿರ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಗ್ರಾಮದ ಹಿರಿಯ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ರಾದ ಪ್ರಸನ್ನ ಗಡಾದ್ ಮತ್ತು ಇನ್ನೋವ೯ ಗ್ರಾಮದ ಮುಖಂಡ ಮತ್ತು ತಾಲೂಕ ಪಂಚಾಯಿತಿಯ ಮಾಜಿ ಅಧ್ಯಕ್ಷ ಅಮರೇಶ್ ಉಪಲಾಪುರ ರವರುಗಳ ಮಾರ್ಗದರ್ಶನ ಮತ್ತು  ಜಂಟಿ ನೇತೃತ್ವದಲ್ಲಿ   ಗೆಳೆಯರ ಬಳಗದ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿ ಗ್ರಾಮದ ಗುರು ಹಿರಿಯರ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕಿನ್ನಾಳ ಕಾ ರಾಜಾ ಎಂಬ ಹೆಸರಿನ ಗಣೇಶ್ ಮೂರ್ತಿ ಪ್ರತಿಷ್ಠಾಪಿಸಿದ್ದು ಶುಕ್ರವಾರ ಬೆಳಿಗ್ಗೆ ಕುವೆಂಪು ಶತಮಾನೋತ್ಸವ ಮಾಧರಿ  ಶಾಲೆಯ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು  ಹೆಚ್ಚಿನ ಸಂಖ್ಯೆಯಲ್ಲಿ  ವಿದ್ಯಾರ್ಥಿಗಳು ಪಾಲ್ಗೊಂಡು ರಂಗೋಲಿ ಹಾಕುವುದರ ಮೂಲಕ ಜನಮನ ರಂಜಿಸಿತು ನಂತರ ಅವರಿಗೆ ಬಹುಮಾನ ಘೋಷಿಸಲಾಯಿತು, ಗೆಳೆಯರ ಬಳಗದ ಪದಾಧಿಕಾರಿಗಳು ಯುವಕರು ಒಳ್ಳೆಯ ವ್ಯವಸ್ಥೆಯನ್ನು ಮಾಡಿ ಅಚ್ಚುಕಟ್ಟಾದ ಕಾರ್ಯ ವ್ಯವಸ್ಥೆ ಮಾಡಿದರು,,
ಸಂಭ್ರಮದ ಗಣೇಶೋತ್ಸವ ಹಾಗೂ ರಂಗೋಲಿ ಸ್ಪರ್ಧೆ ಕಾರ್ಯ ವ್ಯವಸ್ಥೆ ಗೊಳಿಸುವಲ್ಲಿ ತೊಡಗಿರುವ ಗೆಳೆಯರ ಬಳಗದ ಪದಾಧಿಕಾರಿಗಳು ಅನೇಕ ಜನ ಯುವಕರು ಕಾರ್ಯ ಕ್ರಮದ ಯಶಸ್ವಿಗೆ  ಶ್ರಮಿಸಿದರು, ಯುವಕರ ಪರಿಶ್ರಮ ಮತ್ತು ಹಿರಿಯರ ಮಾರ್ಗದರ್ಶನ ದಲ್ಲಿ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಕಾರ್ಯ ಯಶಸ್ವಿಯಾಗಿ ಜರುಗಿತು , ಹೆಚ್ಚಿನ ಸಂಖ್ಯೆಯಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು,
WhatsApp Group Join Now
Telegram Group Join Now
Share This Article