ಹೆಣ್ಣಿಗೆ ಎಂಎಲ್​ಎ ಆಗುವ ಹುಚ್ಚು ಹಿಡಿದರೆ ಬಿಡಿಸಲಾಗುವುದಿಲ್ಲ; ಮುನಿರತ್ನ ಕುಸುಮಾಗೆ ಟಾಂಗ್

Ravi Talawar
ಹೆಣ್ಣಿಗೆ ಎಂಎಲ್​ಎ ಆಗುವ ಹುಚ್ಚು ಹಿಡಿದರೆ ಬಿಡಿಸಲಾಗುವುದಿಲ್ಲ; ಮುನಿರತ್ನ ಕುಸುಮಾಗೆ ಟಾಂಗ್
WhatsApp Group Join Now
Telegram Group Join Now

ಬೆಂಗಳೂರು: ಒಂದು ಹೆಣ್ಣಿಗೆ ಯಾವ ಹುಚ್ಚು ಹಿಡಿದರೂ ಅದನ್ನು ಬಿಡಿಸಬಹುದು, ಆದರೆ ಎಂಎಲ್​ಎ ಆಗುವ ಹುಚ್ಚು ಹಿಡಿದರೆ ಬಿಡಿಸಲಾಗುವುದಿಲ್ಲ ಎಂದು ಶಾಸಕ ಮುನಿರತ್ನ ಪರೋಕ್ಷವಾಗಿ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪಗೆ ಟಾಂಗ್ ನೀಡಿದ್ದಾರೆ.

ರಾಜರಾಜೇಶ್ವರಿ ನಗರದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣಿಗೆ ಯಾವ ಹುಚ್ಚು ಹಿಡಿದ್ರೂ ತಪ್ಪಿಸಬಹುದು. ಆದ್ರೆ, ಎಂ.ಎಲ್‌.ಎ ಆಗುವ ಹುಚ್ಚು ಹಿಡಿದರೆ ಅದನ್ನು ತಪ್ಪಿಸೋಕೆ ಆಗಲ್ಲ ಎಂದಿದ್ದಾರೆ. ಆಕೆ ಶಾಸಕಿ ‌ಆಗಬೇಕು ಎಂದು ಒಂದೇ ಹಠ ಹಿಡಿದಿದ್ದಾರೆ. ಅದಕ್ಕಾಗಿ ಯಾವ ಹಂತಕ್ಕೆ ಹೋಗಲೂ ಸಿದ್ಧವಿದ್ದಾರೆ.

ಶಾಸಕಿ ಆಗಬೇಕು ಅಂದ್ರೆ ಮುನಿರತ್ನಗೆ ಹುಚ್ಚು ಹಿಡಿಯಬೇಕು. ಅದಕ್ಕೆ ಮುನಿರತ್ನನಿಗೆ ಹುಚ್ಚು ಹಿಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಯಾರ ಹಣೇಲಿ ಏನು ಬರೆದಿದೆಯೋ ಗೊತ್ತಿಲ್ಲ, ಭೂಮಿಗೆ ಬಂದವರೆಲ್ಲ ಒಂದಲ್ಲ ಒಂದು ದಿನ ಹೋಗಲೇಬೇಕು ಎಂದರು. ಅವರಿಂದಲೇ ನಾನು ಹೋಗಬೇಕು ಅಂತಿದ್ರೆ, ಯಾರೂ ತಪ್ಪಿಸೋದಕ್ಕೆ ಆಗಲ್ಲ.

ಯಾವಾಗ ಏನು ಬೇಕಿದ್ರೂ ಆಗಬಹುದು, ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ. ಈ ಮಧ್ಯೆ ಪೊಲೀಸರು ನನ್ನ ರಕ್ಷಣೆಗೆ ನಿಂತಿದ್ದಾರೆ, ಅವರಿಗೆ ನನ್ನ ಧನ್ಯವಾದ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article