ಧರ್ಮಸ್ಥಳ: ಎಸ್ಐಟಿ ರಚನೆ ಭಕ್ತರಿಗೆ ಅವಮಾನ – ಮೀನಳ್ಳಿ ತಾಯಣ್ಣ

Ravi Talawar
ಧರ್ಮಸ್ಥಳ: ಎಸ್ಐಟಿ ರಚನೆ ಭಕ್ತರಿಗೆ ಅವಮಾನ – ಮೀನಳ್ಳಿ ತಾಯಣ್ಣ
WhatsApp Group Join Now
Telegram Group Join Now
ಬಳ್ಳಾರಿ ಆ 29. ಪವಿತ್ರ ಹಿಂದೂ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಪ್ರಚಾರಗಳು ಧರ್ಮಭಾವನೆಗೆ ಧಕ್ಕೆ ತರುವಂತಿವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ಘಟನೆಗಳ ಬಗ್ಗೆ ಸುಳ್ಳು ಆರೋಪಗಳನ್ನು ಆಧಾರಮಾಡಿಕೊಂಡು ಸರ್ಕಾರ ಎಸ್ಐಟಿ ರಚಿಸಿರುವುದು ಖಂಡನೀಯ ಎಂದು ಅವರು ಹೇಳಿದರು.
ಇಂದು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಧರ್ಮಸ್ಥಳವನ್ನು ಕಳಂಕಗೊಳಿಸುವ ಪ್ರಯತ್ನ ನಡೆಯುತ್ತಿದೆ. ಧರ್ಮಸ್ಥಳದಲ್ಲಿ ನೂರಾರು ಕೊಲೆಗಳಾಗಿವೆ ಎಂಬ ಸುಳ್ಳು ಹೇಳಿಕೆಗಳನ್ನು ನಂಬಿ ಸರ್ಕಾರ ಎಸ್ಐಟಿ ರಚಿಸಿದೆ. ಇದು ಭಕ್ತರ ಭಾವನೆಗೆ ಅವಮಾನ. ಸರ್ಕಾರ ತಕ್ಷಣವೇ ಈ ಸುಳ್ಳು ಪ್ರಚಾರ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ತಾಯಣ್ಣ ಅವರು ಮುಂದುವರಿಸಿ, ಈ ವಿರೋಧದ ನಿಟ್ಟಿನಲ್ಲಿ ಜಾತ್ಯಾತೀತ ಜನತಾದಳದ ವತಿಯಿಂದ ಇದೇ 31ರಂದು ರಾಜ್ಯದಾದ್ಯಂತ ನಿಖಿಲ್ ಕುಮಾರ ಸ್ವಾಮಿ ನೇತೃತ್ವದಲ್ಲಿ ಧರ್ಮಸ್ಥಳದ ನೇತ್ರಾವತಿಯಿಂದ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಪಾದಯಾತ್ರೆಯಲ್ಲಿ ಜಿಲ್ಲೆಯಿಂದ ನೂರಾರು ಜನ ಭಾಗವಹಿಸಲಿದ್ದಾರೆ ಎಂದೂ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿ ನಗರ ಘಟಕದ ಅಧ್ಯಕ್ಷರು ಹೊನ್ನೂರು ಸ್ವಾಮಿ(ವಂಡ್ರಿ),ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪ,  ನಗರ ಯುವ ಘಟಕ ಅಧ್ಯಕ್ಷ ಕಿರಣ್ ಕುಮಾರ್ , ಸಿರುಗುಪ್ಪ ತಾಲ್ಲೂಕು ಅಧ್ಯಕ್ಷರು ಶಿವ ನಾರಾಯಣ,ಮುತ್ತು, ಪ್ರದೀಪ್, ಹೊನ್ನಳ್ಳಿ ರಾಜ್,ರುಮಾನ,ವಿಜಯ, ನಾಗವೇಣಿ  ಸೇರಿದಂತೆ ಮತ್ತು ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article