ಪಟಾಕಿ ಅಂಗಡಿಗಳ ಸ್ಥಳಾಂತರಕ್ಕೆ ಆದೇಶ

Ravi Talawar
ಪಟಾಕಿ ಅಂಗಡಿಗಳ ಸ್ಥಳಾಂತರಕ್ಕೆ ಆದೇಶ
WhatsApp Group Join Now
Telegram Group Join Now
ಗದಗ ಅಗಸ್ಟ 28: ಗಣೇಶ ಚತುರ್ಥಿ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಅಧಿಕೃತ ಲೈಸನ್ಸ್ ಪಡೆದುಕೊಂಡು ಕ್ರಮಬದ್ಧವಾಗಿ ನವೀಕರಣವಾಗಿರುವ ಪಟಾಕಿ ಲೈಸನ್ಸ್ದಾರರ ಅಂಗಡಿಗಳನ್ನು ಗಣೇಶ ಚತುರ್ಥಿಯ ಪ್ರಯುಕ್ತ ಅಗಸ್ಟ 27 ರಿಂದ ಸೆಪ್ಟೆಂಬರ್ 7 ರವರೆಗೆ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 19 ರಿಂದ 23 ರವರೆಗೆ ಗದಗ ಜಿಲ್ಲೆಯ ನಗರ/ ಪಟ್ಟಣ/ ಗ್ರಾಮೀಣ ಪ್ರದೇಶಗಳ ಕೆಳಕಾಣಿಸಿದ ತೆರೆದ ಸ್ಥಳಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ದಾಸ್ತಾನು ಮಾಡಿ ಮಾರಾಟ ಮಾಡುವ ಷರತ್ತಿಗೊಳಪಟ್ಟು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಆದೇಶಿಸಲಾಗಿದೆ. ಅನಧಿಕೃತ ಪಟಾಕಿ ಅಂಗಡಿಗಳಿಗೆ ವ್ಯಾಪಾರ ಮಾಡುವುದನ್ನು ನಿರ್ಬಂಧಿಸಿದೆ.
ಲಕ್ಷೆö್ಮÃಶ್ವರ ತಾಲೂಕಿನ ಲಕ್ಷೆö್ಮÃಶ್ವರದ ಉಮಾ ಮಹಾವಿದ್ಯಾಲಯದ ಕ್ರೀಡಾಂಗಣ, ಶಿಗ್ಲಿಯ ಹೊಸ ಬಸ್ ಸ್ಟಾö್ಯಂಡ್ ಹತ್ತಿರ ಬಯಲು ಜಾಗೆ ; ಶಿರಹಟ್ಟಿ ತಾಲೂಕಿನಲ್ಲಿ ಶಿರಹಟ್ಟಿಯ ಎಫ್.ಎಂ.ಡಬಾಲಿ ಹೈಸ್ಕೂಲ ಮೈದಾನ ಹಾಗೂ ಬೆಳ್ಳಟ್ಟಿಯ ಶ್ರೀ ಯೋಗಿ ವೇಮನ ಪ್ರೌಢಶಾಲೆ ಮೈದಾನ: ಮುಂಡರಗಿ ತಾಲೂಕಿನಲ್ಲಿ ಮುಂಡರಗಿ ತಾಲೂಕು ಕ್ರೀಡಾಂಗಣ; ರೋಣ ತಾಲೂಕಿನಲ್ಲಿ ರೋಣದ ಜಕ್ಕಲಿ ರಸ್ತೆಯಲ್ಲಿ ಬರುವ ಸೊಸೈಟಿಯ ಬಯಲು ಜಾಗೆ ಹಾಗೂ ಹೊಳೆಆಲೂರದ ಎ.ಪಿ.ಎಂ.ಸಿ. ಬಯಲು ಜಾಗೆ ಹೊಳೆಆಲೂರ ; ಗಜೇಂದ್ರಗಡ ತಾಲೂಕಿನಲ್ಲಿ ಗಜೇಂದ್ರಗಡದ ಶ್ರೀ ಸಂತೋಷ ತಂದೆ ಶ್ಯಾಮಸುಂದರ ಮಂತ್ರಿ ಇವರ ಖುಲ್ಲಾ ಜಾಗೆ , ನರೇಗಲ್‌ದ ಎ.ಪಿ.ಎಂ.ಸಿ. ಗೌಡಾನ್ ಹತ್ತಿರ ಬಯಲು ಜಾಗೆ; ನರಗುಂದ ತಾಲೂಕಿನಲ್ಲಿ ನರಗುಂದ ದಂಡಾಪೂರದ ಶ್ರೀರಾಮ ಮಂದಿರದ ಪಕ್ಕ ಇರುವ ಸರ್ಕಾರಿ ಜಾಗೆ ; ಗದಗ ತಾಲೂಕಿನಲ್ಲಿ ವಿ.ಡಿ.ಎಸ್.ಟಿ.ಕಾಲೇಜು ಮೈದಾನ ಹಾಗೂ ಮುಳಗುಂದದ ಎಸ್.ಜೆ.ಜೆ.ಎಂ.ಸA.ಪದವಿ ಪೂರ್ವ ಕಾಲೇಜು ಮೈದಾನ ಈ ಸ್ಥಳಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ದಾಸ್ತಾನು ಮಾಡಿ ಮಾರಾಟ ಮಾಡುವ ಷರತ್ತಿಗೊಳಪಟ್ಟು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
WhatsApp Group Join Now
Telegram Group Join Now
Share This Article