ರಾಯಬಾಗ: ಗ್ರಾಮೀಣ ಭಾಗದ ರೈತರಿಗೆ ಮತ್ತು ಜನರಿಗೆ ಅನುಕೂಲವಾಗಲು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಿ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಗುರುವಾರ ಜಿ.ಪಂ.ಇಲಾಖೆಯಡಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ಬಸ್ ನಿಲ್ದಾಣದಿಂದ ಬೆಳೆಸಿ ತೋಟದ ವರೆಗೆ 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ, 40 ಲಕ್ಷ ಅನುದಾನದಲ್ಲಿ ಕಂಚಕರವಾಡಿ ಗ್ರಾಮದಿಂದ ರಾಯಬಾಗ-ಅಂಕಲಿ ಕೂಡುವ ರಸ್ತೆ ಡಾಂಬರೀಕರಣ ಹಾಗೂ 40 ಲಕ್ಷ ವೆಚ್ಚದಲ್ಲಿ ಭೆಂಡವಾಡ ಗ್ರಾಮದ ರಾಮನಕಟ್ಟೆಯಿಂದ ರೇವಣಸಿದ್ದೇಶ್ವರ ದೇವಸ್ಥಾನ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಜಿ.ಪಂ.ಎಇ ಎಸ್.ಎಸ್.ಹೊಸಮನಿ, ಯಡ್ರಾಂವ ಗ್ರಾ.ಪಂ.ಅಧ್ಯಕ್ಷೆ ಅಶ್ವಿನಿ ಧನಗರ, ಸದಾಶಿವ ಘೊರ್ಪಡೆ, ರೇವಣು ಶಿವಾಪೂರೆ, ಅಪ್ಪು ಬಾನೆ, ಸುರೇಶ ಚೌಗುಲಾ, ರೇವಣು ದುಪದಾಳೆ, ಅಲಗೊಂಡ ತಟ್ಟಿಮನಿ,
ಕಲ್ಲಪ್ಪ ನಿಂಗನೂರ, ಅಜೀತ ಸಂಗಮೇಶ್ವರ, ಶಿವಪ್ಪಾ ಪಡಲಾಳೆ, ಸುರೇಶ ಐಹೊಳೆ, ಸೀಮಾ ಖೋತ, ರಾಜು ಬೆಳೆಸಿ, ಕಲ್ಲಪ್ಪಾ ಸನದಿ, ಅಲಗೌಡ ಪಾಟೀಲ, ಸಿ.ಪಿ.ನಾಯಿಕ, ಶಿವಾಜಿ ಕಳ್ಳಿ, ಅಣ್ಣಪ್ಪ ಕುಡಚಿ, ಶಿವಾನಂದ ಬೆಳೆಸಿ, ಅಣ್ಣಾಸಾಹೇಬ ಬೆಳೆಸಿ, ವಿಠ್ಠಲ ಐಹೊಳೆ, ಸಂತೋಷ ಮಾಂಗ, ಶ್ರೀಕಾಂತ ಪಡಲಾಳೆ, ನಿಂಗಪ್ಪಾ ಪಕಾಂಡಿ , ಸಂಜಯ ಹಂಜೆ, ಮಹಾದೇವ ನಾಯಿಕ , ವೆಂಕಪ್ಪ ವಡ್ಡರ, ಅಪ್ಪು ಪಾಟೀಲ, ಗಜಾನನ ಜಗನ್ನಾಥ, ರಾಯಪ್ಪ ಬೀಸಗುಪ್ಪಿ, ಸಂಜಯ ಪಾಟೀಲ ಸೇರಿ ಅನೇಕರು ಇದ್ದರು.