ಹರಪನಹಳ್ಳಿ :- ಸ್ಥಳೀಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಪಿ.ಬಿ.ಗೌಡ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಪವನಕುಮಾರ ಘೋಷಣೆ ಮಾಡಿದರು.
ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷ ಸ್ಥಾನಕ್ಕೆ ಪಿ.ಟಿ.ಪರೇಮೇಶ್ವರ ನಾಯ್ಕ್ ಅವರ ಮಾರ್ಗದರ್ಶನದಂತೆ ಬುದುವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ.ಬಿ.ಗೌಡ ಒಬ್ಬರೆ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾದರು. ನಂತರ ಕಾಂಗ್ರೆಸ್ ಪಕ್ಷದ ಮುಖಂಡರು, ನಿರ್ದೇಶಕರು, ಆಗಮಿಸಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ನೂತನ ಅಧ್ಯಕ್ಷರಾದ ಪಿ.ಬಿ.ಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿನ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಮಾಡಲು ಸಾದ್ಯವಾಗಿದ್ದು, ಇದೇ ರೀತಿಯ ಒಗ್ಗಟ್ಟು ಮುಂದುವರೆಯಲಿದೆ, ನಾನು ಈಗಾಗಲೇ ನಾಲ್ಕು ಬಾರಿ ನಿರ್ದೇಶಕನಾಗಿ, ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. ರೈತರ ಮೇಲೆ ಯಾವುದೇ ಹೊರೆಯಾಗದಂತೆ ಸಾಲ ನೀಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.ಜಿಲ್ಲೆಯಲ್ಲಿ ಹರಪನಹಳ್ಳಿ ತಾಲೂಕಿನ ಬ್ಯಾಂಕ್ ವಸೂಲಾತಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದು, ನಮ್ಮ ತಾಲೂಕಿನ ರೈತರು ಸಹ ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿ ಮಾಡುತ್ತಾ ಬಂದಿರುವುದು ಬ್ಯಾಂಕಿನ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಬಂದಿದೆ. ಇದೇ ರೀತಿ ಎಲ್ಲಾರ ಸಹಕಾರ ಪಡೆದು ಬ್ಯಾಂಕಿನ ಅಭಿವೃದ್ಧಿಗೆ ಪ್ರಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್‌ನ ಮಾಜಿ ಅದ್ಯಕ್ಷರಾದ ಎಚ್.ವಿಶಾಲಕ್ಷಮ್ಮ, ಉಪಾಧ್ಯಕ್ಷ ಬಿ.ರಾಜಕುಮಾರ, ನಿರ್ದೇಶಕರಾದ ಮುತ್ತಿಗಿ ಸಾಬಳ್ಳಿ ಜಂಬಣ್ಣ, ಬೇಲೂರು ಸಿದ್ದೇಶ್, ಪಿ.ಕೆ.ಮಹಾದೇವಪ್ಪ, ಎ.ಬಸವರಾಜಪ್ಪ, ಟಿ.ಜಗದೀಶ, ಶಿವಕುಮಾರಗೌಡ.ಆರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹೆಚ್. ಬಿ.ಪರಶುರಾಮಪ್ಪ, ಮುಖಂಡರಾದ ಎಚ್.ಕೆ.ಹಾಲೇಶ, ಬೇಲೂರು ಅಂಜಪ್ಪ, ಪೂಜಾರ್ ಶಶಿಧರ್, ಹೆಚ್.ದೇವರಾಜ್, ಅಲಮರಸಿಕೇರಿ ಪರುಶುರಾಮ್, ಚಿಗಟೇರಿ ಜಂಬಣ್ಣ, ಪುರಸಭೆ ಸದಸ್ಯ ಜಾಕೀರ್ ಸರ್ಕಾವಸ್, ಚಿಗಟೇರಿ ಬ್ಲಾಕ್ ಅಲ್ಪಾ ಸಂಖ್ಯಾತರ ಅದ್ಯಕ್ಷ ನೂರೂದ್ದಿನ್, ಸೇರಿದಂತೆ ಇತರರಿದ್ದರು.