ಉದಯ ಟಿವಿ ಹೊಸ ಟ್ರೆಂಡ್ ಗೆ ಅನುಗುಣವಾಗಿ ಸಿದ್ಧಪಡಿಸುರುವ ವಿಭಿನ್ನ ರೀತಿಯ ಭಾವನಾತ್ಮಕ ಕಥಾಹಂದರದ
ಹೊಸ ಧಾರವಾಹಿ ‘ಮಾಂಗಲ್ಯ’.
ಮಂಗಳವಾರ ಮಾಂಗಲ್ಯವಾರ ಎಂಬ ಹೊಸ ವಾಕ್ಯದೊಂದಿಗೆ ಸೆಪ್ಟಂಬರ್ 2 ಮಂಗಳವಾರದಿಂದ ಪ್ರತಿದಿನ ಸಂಜೆ 7 ಗಂಟೆಗೆ ‘ಮಾಂಗಲ್ಯ’ ಪ್ರಸಾರವಾಗಲಿದೆ.
ಈ ರೀತಿ ಮಂಗಳವಾರದಿಂದ ಪ್ರಸಾರ ಆರಂಭಿಸುತ್ತಿರುವ ಮೊಟ್ಟ ಮೊದಲ ಕನ್ನಡ ಧಾರಾವಾಹಿ ‘ಮಾಂಗಲ್ಯ’ ಏನ್ನಲಾಗಿದೆ.
ದುರ್ಗಾಪುರದ ಮಯೂರಿ ಮನೆ ಮಗನಂತೆ ಎಲ್ಲಾ ಜವಾಬ್ದಾರಿ ನಿಭಾಯಿಸುವ ಹುಡುಗಿ. ಕೃಷಿ ಕೆಲಸ, ಹೈನುಗಾರಿಕೆಯಲ್ಲಿ ಎತ್ತಿದ ಕೈ. ನಗರದ ಶ್ರೀಮಂತ ಕುಟುಂಬದ ತೋಟದ ಉಸ್ತುವಾರಿ ಸಹ ಇವಳದೇ. ಆ ಶ್ರೀಮಂತ ಕುಟುಂಬದ ಕುಲಪುತ್ರನೇ ಕಥಾನಾಯಕ ತಾರಕ್. ಶ್ರೀಮಂತಿಕೆಯ ಅಹಂಕಾರದಲ್ಲಿ ಮೆರೆಯುತ್ತಿರುವ ಅಮ್ಮನ ವರ್ತನೆಗಳು
ತಾರಕ್ ಗೆ ಅಲರ್ಜಿ ಕಾರಣಾಂತರದಿಂದ ಮದ್ಯವ್ಯಸನಿಯಾಗಿದ್ದಾನೆ. ಒಳ್ಳೆಯ ಮನಸ್ಸಿನ ಕುಡುಕ ಒಂದು ಸಂದರ್ಭದಲ್ಲಿ ತನ್ನ ಅಮ್ಮನ ಅಹಂಕಾರ ಮುರಿಯಲು ಬಡ ಕುಟುಂಬದ ಮಯೂರಿಗೆ ಮಾಂಗಲ್ಯ ಕಟ್ಟಿಬಿಡುತ್ತಾನೆ. ಅಲ್ಲಿಂದ ಮಯೂರಿಯ ಜೀವನದ ಹೊಸ ಪಯಣ ಶುರುವಾಗುತ್ತದೆ.
ಕನ್ನಡ ಕಿರುತೆರೆಯ ಜನಪ್ರಿಯ ನಾಯಕನಟ ಬಿಗ್ ಬಾಸ್, ಗಾಂಧಾರಿ, ಲಕ್ಷ್ಮಣ, ಶ್ರೀಗೌರಿ ಖ್ಯಾತಿಯ ಜಗನ್ ಮಾಂಗಲ್ಯದಲ್ಲಿ ಒಳ್ಳೆಯ ಕುಡುಕ ಗಂಡನ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ನಿರ್ಮಾಣ ಹಾಗೂ ಪ್ರಧಾನ ನಿರ್ದೇಶನ ಕೂಡ ಅವರದೇ. ” ಉದಯ ಟಿವಿ ಜೊತೆ ನನ್ನ ಮೊದಲನೇ ದಾರಾವಾಹಿ ಇದು. ಇದರಲ್ಲಿ ನಟ, ನಿರ್ದೇಶಕ ಹಾಗು ನಿರ್ಮಾಪಕ ಮೂರು ಪಾತ್ರಗಳನ್ನು ನಿರ್ವಹಿಸುತ್ತಿದ್ದೇನೆ.
ಕುಡುಕ ತಾರಕ್ ಪಾತ್ರ ಬಹಳ ಸವಾಲಿನದ್ದಾಗಿದೆ. ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ನಿರ್ದೇಶಕನಾಗಿ ತುಂಬಾ ದೊಡ್ಡ ಜವಾಬ್ದಾರಿ ಇದೆ ಮುತುವರ್ಜಿಯಿಂದ ಆ ಕೆಲಸ ಮಾಡುತ್ತಿದ್ದೇನೆ. ಹಾಗೆಯೇ ನಿರ್ವಾಪಕನಾಗಿ ಇದೊಂದು ಒಳ್ಳೆಯ ಅನುಭವ. ಉದಯ ಟಿವಿಯ ಪ್ರತಿಷ್ಠಿತ ಶೀರ್ಷಿಕೆ ‘ಮಾಂಗಲ್ಯ’. ಈ ಶೀರ್ಷಿಕೆಯಲ್ಲಿ ಮತ್ತೆ ಧಾರವಾಹಿ ಮಾಡುತ್ತಿರುವುದು ನನ್ನ ಅದೃಷ್ಟ. ಸನ್ ಟಿವಿ ನೆಟ್ ವರ್ಕ್
ನನಗೆ ಇಂಥ ಅವಕಾಶ
ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದ” ಎನ್ನುತ್ತಾರೆ ಜಗನ್.
ಮಾಂಗಲ್ಯದಲ್ಲಿ ಒಳ್ಳೇ ಕುಡುಕ ಗಂಡನನ್ನು ಸರಿ ದಾರಿಗೆ ತರುವ ಪಾತ್ರದಲ್ಲಿ
ಖ್ಯಾತ ಕಲಾವಿದೆ ಐಶ್ವರ್ಯ ಪಿಸ್ಸೆ ಕಾಣಿಸಿಕೊಳ್ಳುತ್ತಿದ್ದಾರೆ. ಅನುರೂಪ, ಗಿರಿಜಾ ಕಲ್ಯಾಣ, ಸರ್ವಮಂಗಳ ಮಾಂಗಲ್ಯೆ ಮುಂತಾದ ಕನ್ನಡ ಅಲ್ಲದೆ ತೆಲುಗು ಧಾರವಾಹಿಗಳಲ್ಲಿ ಹಾಗೂ ಸಂತು ಸ್ಟ್ರೇಟ್ ಫಾರ್ವರ್ಡ್, ಶ್ರೀಕಂಠ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಐಶ್ವರ್ಯ ಪಿಸ್ಸೆ ಅವರದು. “ಸುಂದರಿ ಧಾರವಾಹಿ ನಂತರ ನನ್ನನ್ನು ಈ ಪಾತ್ರಕ್ಕೆ ಉದಯ ಟಿವಿ ಆಯ್ಕೆ ಮಾಡಿಕೊಂಡಿದ್ದು ಖುಷಿಯ ವಿಚಾರ. ಮಯೂರಿ ಅನ್ನೋ ಜವಾಬ್ದಾರಿಯುತ ಮೃದು ಸ್ವಭಾವದ ಹುಡುಗಿಯ ಪಾತ್ರಕ್ಕೆ ನ್ಯಾಯ ಸಲ್ಲಿಸುವ ವಿಶ್ವಾಸವಿದೆ. ವೀಕ್ಷಕರು ದೀರ್ಘಕಾಲ ಮಾಂಗಲ್ಯವನ್ನು ಮುನ್ನಡೆಸುತ್ತಾರೆ ಎಂಬ ಭರವಸೆ ಇದೆ” ಎಂದಿದ್ದಾರೆ ಐಶ್ವರ್ಯ ಪಿಸ್ಸೆ.
ಜಾನ್ಸಿ, ವೆಂಕಟೇಶ್ ಬಿ.ಎಂ., ಇಂಚರ, ದಿಶಾ, ಹನುಮಂತು, ಜಯಬಾಲು, ಚಿತ್ರ, ರೂಪೇಶ್, ದಾಮಿನಿ ಮುಂತಾದವರು ನಟಿಸುತ್ತಿದ್ದಾರೆ. ನವೀನ್ ಸೋಮನಹಳ್ಳಿ ಸಂಚಿಕೆ ನಿರ್ದೇಶನದ ಜವಾಬ್ದಾರಿ
ಹೊತ್ತುಕೊಂಡಿದ್ದಾರೆ. ಛಾಯಾಗ್ರಹಣ ಮಂಜು, ಸಂಕಲ ಧನು.
“ಉದಯ ಟಿವಿ ಜೊತೆ ಮಾಂಗಲ್ಯದ್ದು ಅವಿನಾಭಾವ ಸಂಬಂಧ. ಕನ್ನಡದ ಅತಿ ದೀರ್ಘ ಜನಪ್ರಿಯ ಧಾರವಾಹಿಗಳಲ್ಲಿ ಒಂದೆಂಬ ಹೆಗ್ಗಳಿಕೆ ಗಳಿಸಿದ್ದ ‘ಮಾಂಗಲ್ಯ’ ಈ ಹಿಂದೆ ಎಂಟು ವರ್ಷ ಕಾಲ ಪ್ರಸಾರವಾಗಿ ಅಳಿಸಲಾಗದ ಛಾಪು ಮೂಡಿಸಿತ್ತು. ಅದೇ ಹಾದಿಯಲ್ಲಿ ಹೊಸ ‘ಮಾಂಗಲ್ಯ’ ವೀಕ್ಷಕರ ಮನ ಗೆಲ್ಲಲಿದೆ ಎಂಬುದು ಉದಯ ಟಿವಿಯ ಆಶಯ. ಈ ಹಬ್ಬದ ಋತುವಿನಲ್ಲಿ ಹೊಸ ಬಗೆಯ ವರ್ಣಮಯ ಗ್ರಾಫಿಕ್ಸ್ ಪ್ರಸ್ತುತಿ ಮೂಲಕ ‘ಮಾಂಗಲ್ಯ’ ಸೆಪ್ಟಂಬರ್ 2 ಮಂಗಳವಾರ ಆರಂಭಗೊಂಡು ಪ್ರತಿವಾರ ಸೋಮವಾರದಿಂದ ಶನಿವಾರ 7 ಗಂಟೆಗೆ ಪ್ರಸಾರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.