ರೈಸ್ ಆಫ್ ಹ್ಯೂಮನಿಟಿ ಟ್ರಸ್ಟ್ ನ ನೂತನ ಕಚೇರಿ ಉದ್ಘಾಟಿನೆ ; ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಹುಟ್ಟುಹಬ್ಬ 

Ravi Talawar
ರೈಸ್ ಆಫ್ ಹ್ಯೂಮನಿಟಿ ಟ್ರಸ್ಟ್ ನ ನೂತನ ಕಚೇರಿ ಉದ್ಘಾಟಿನೆ ; ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಹುಟ್ಟುಹಬ್ಬ 
WhatsApp Group Join Now
Telegram Group Join Now
ಬಳ್ಳಾರಿ:28. ರೈಸ್ ಆಫ್ ಹ್ಯುಮಾನಿಟಿ ಹೆಸರೇ ಒಂದು ಆಕರ್ಷಕವಾಗಿದೆ ಜಗತ್ತಿನಲ್ಲಿ ಮಾನವೀಯತೆಯನ್ನು ಮೀರಿದ್ದು ಯಾವುದೇ ಇಲ್ಲ, ಆ ಮಾನವೀಯತೆಯೇ ಫಸ್ಟ್ ಹೆಸರಿನಲ್ಲಿದೆ ಅದನ್ನು ಎಲ್ಲರೂ ರೂಡಿಸಿಕೊಳ್ಳಬೇಕು ಮತ್ತು
ಟ್ರಸ್ಟ್ ವತಿಯಿಂದ ಇನ್ನಷ್ಟು ಮತ್ತಷ್ಟು ಸಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ತನ್ನ ಹೆಸರಲ್ಲಿ ಇರುವಂತೆ ಮಾನವೀಯತೆಯ ಪ್ರತೀಕವಾಗಬೇಕೆಂದು ಬಳ್ಳಾರಿ ಗ್ರಾಮೀಣ ಶಾಸಕ ಮಾಜಿ ಸಚಿವ ಬಿ ನಾಗೇಂದ್ರ ತಿಳಿಸಿದರು.
ಅವರು ಇಂದು ನಗರದ ಕೌಲ್ ಬಜಾರ್ ಪ್ರದೇಶದ ಬಾಬು ಚೌಕ್ ನ ಮದೀನಾ ಮಾರ್ಕೆಟ್ ಕಟ್ಟಡದಲ್ಲಿರುವ ರೈಸ್ ಆಫ್ ಹುಮಾನಿಟಿ  ಟ್ರಸ್ಟ್ ನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ,
 ಈ ಸಂಸ್ಥೆ ಬಳ್ಳಾರಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಲಿ ಎಂದು ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಹಲವು ಗಣ್ಯರು, ಸಮಾಜಸೇವಕರು, ಹಾಗೂ ಸ್ಥಳೀಯರು ಪಾಲ್ಗೊಂಡು ಸಂಸ್ಥೆಯ ಮುಂದಿನ ಹಾದಿಯಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
 ಇದೇ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್ ರವರ 55ನೆ ಹುಟ್ಟುಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಪ್ರಯುಕ್ತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಗುರಿಯಾದ ಹಲವಾರು ಜನರಿಗೆ ಕನ್ನಡಕಗಳನ್ನು ನಾಸಿರ್ ಹುಸೇನ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಆಸಿಫ್, ನಾಸಿರ್ ಹುಸೇನ್ ಅವರು ಈಗಾಗಲೇ  ದೆಹಲಿ ಮಟ್ಟದ ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಉನ್ನತವಾದ ಹುದ್ದೆಗಳನ್ನು ಹೊಂದಿದ್ದಾರೆ ಮುಂದಿನ ದಿನಗಳಲ್ಲಿ ಅವರು ಕೇಂದ್ರ ಸಚಿವರಾಗಲಿ ಅವರಿಗೆ ದೇವರು ಇನ್ನಷ್ಟು ಆಯುಷ್ಯ ಆರೋಗ್ಯ ಮತ್ತು ಉನ್ನತವಾದ ಅಧಿಕಾರವನ್ನು ನೀಡಲಿ ಎಂದು ಆಶಿಸಿದರು.
 ಈ ಸಂದರ್ಭದಲ್ಲಿ ವಾಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಹುಮಯೂನ್ ಖಾನ್, ಮುಂಡ್ರಿಗಿ ನಾಗರಾಜ್ ರೈಸ್ ಆಫ್ ಹ್ಯುಮಾನಿಟಿ ಟ್ರಸ್ಟ್ ವತಿಯಿಂದ ಸಮಾಜಕ್ಕಾಗಿ ಉಚಿತವಾಗಿ  ಆಂಬುಲೆನ್ಸ್ ಮತ್ತು ಶವ ಸಂಸ್ಕಾರಕ್ಕೆ ಫ್ರೀಜರ್ ಗಳನ್ನು ಲೋಕಾರ್ಪಣೆ ಗೊಳಿಸಿದರು .
ಈ ಸಂದರ್ಭದಲ್ಲಿ ಸರ್ಫಾರಾಜ್, ಶೇಕ್ ಮೂಸಾ, ಹಸೇನ್ ಸಾಬ್,  ವಾಹಿದ್, ಅನ್ವರ್,( ಅನ್ನು) ಸಮೀರ್, ಮನ್ಸೂರ್, ಸಿದ್ದಿಕ್, ಜಮಿರ್, ಶೇರು, ಜಂಡ ಜಿಲನ್, ಅಸ್ಲಾಂ, ರಿಪೋಟರ್ ಅಸ್ಲಾಂ, ಪ್ರತಾಪ್ ಡ್ರೈವರ್ ಜಿಲನ್ ಸೇರಿದಂತೆ ಅನೇಕರಿದ್ದರು
WhatsApp Group Join Now
Telegram Group Join Now
Share This Article