ನವದೆಹಲಿ, ಆಗಸ್ಟ್ 28: ಪ್ರಧಾನಿ ನರೇಂದ್ರ ಮೋದಿಇಂದು ರಾತ್ರಿ ಟೋಕ್ಯೋಗೆ ಪ್ರಯಾಣ ಬೆಳೆಸಲಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಪ್ರಧಾನಿಯ ಮೊದಲ ಜಪಾನ್ ಭೇಟಿ ಇದಾಗಿದೆ. ಎರಡು ದಿನಗಳ ಕಾಲ ಪ್ರಧಾನಿ ಅಲ್ಲಿಯೇ ಇರಲಿದ್ದಾರೆ. ಅಲ್ಲಿ ಎರಡೂ ದೇಶಗಳು ಭದ್ರತೆ, ತಂತ್ರಜ್ಞಾನ ಮತ್ತು ಹೂಡಿಕೆಯ ಹೊಸ ಅಧ್ಯಾಯಗಳನ್ನು ತೆರೆಯಲಿವೆ.
ಮೂಲಗಳ ಪ್ರಕಾರ, ಭಾರತ ಮತ್ತು ಜಪಾನ್ ದ್ವಿಪಕ್ಷೀಯ ಇಂಧನ ಸಹಕಾರವನ್ನು ಬಲಪಡಿಸುವ, ಡಿಜಿಟಲ್ ಪಾಲುದಾರಿಕೆ ಮತ್ತು ಭಾರತದಾದ್ಯಂತ ರೈಲ್ವೆ, ರಸ್ತೆಗಳು ಮತ್ತು ಸೇತುವೆಗಳನ್ನು ಒಳಗೊಂಡ ಹೊಸ ಚಲನಶೀಲ ಪಾಲುದಾರಿಕೆಯನ್ನು ಪ್ರಾರಂಭಿಸುವತ್ತ ಕೆಲಸ ಮಾಡುತ್ತಿವೆ.