ಬೆಂಗಳೂರು28.: ಸೂರ್ಯ ಎಲಿಗನ್ಸ್ ನಿವಾಸಿಗಳ ಸಂಘದ ವತಿಯಿಂದ ಈ ಬಾರಿ ಗಣೇಶ ಚತುರ್ಥಿ ಹಬ್ಬವನ್ನು ಭಕ್ತಿಭಾವ, ಸಾಂಸ್ಕೃತಿಕ ಹಾಗೂ ಹರ್ಷೋತ್ಸಾಹಗಳೊಂದಿಗೆ ಆಚರಿಸಲಾಯಿತು.
ಇನ್ನು, ಆಗಸ್ಟ್ 27ರಿಂದ 31ರವರೆಗೆ ನಡೆಯಲಿರುವ ಈ “ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಭಕ್ತಿ,ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಮಹತ್ವ ನೀಡಲಾಗಿದೆ.
*ಕಾರ್ಯಕ್ರಮಗಳ ವೇಳಾಪಟ್ಟಿ*
27 ಆಗಸ್ಟ್: ಗಣೇಶ ಚತುರ್ಥಿ ಪೂಜೆ
28 ಆಗಸ್ಟ್: ಗಣೇಶ ಭಜನೆ ಸಂಜೆ
29 ಆಗಸ್ಟ್: ಮನರಂಜನಾ ಸ್ಪರ್ಧೆಗಳು ಹಾಗೂ ಆಟೋಪಾಟಗಳು
30 ಆಗಸ್ಟ್: ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯಾಹ್ನ 2.30 ರಿಂದ
31 ಆಗಸ್ಟ್: ಗಣೇಶ ವಿಸರ್ಜನೆ
ಸಮಿತಿಯ ಸದಸ್ಯರು ಈ ಹಬ್ಬವನ್ನು ನಮ್ಮ ಸಮುದಾಯವನ್ನು ಒಂದುಗೂಡಿಸುವ, ಭಕ್ತಿ ಮತ್ತು ಉತ್ಸಾಹವನ್ನು ಹಂಚಿಕೊಳ್ಳುವ, ವಿಶೇಷ ಅವಕಾಶವಾಗಿ ಒದಗಿಸಿದೆ ಎಂದು ತಿಳಿಸಿದರು.
ಮತ್ತು ಸುತ್ತ ಮುತ್ತಲ ನಿವಾಸಿಗಳು ಎಲ್ಲರೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀ ಗಣೇಶನ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ಕೋರಿದ್ದಾರೆ.