ನಾನು ಮತ್ತು ಗುಂಡ 2  ಶಿವನ ಹಾಡು ಬಿಡುಗಡೆ

Ravi Talawar
ನಾನು ಮತ್ತು ಗುಂಡ 2  ಶಿವನ ಹಾಡು ಬಿಡುಗಡೆ
WhatsApp Group Join Now
Telegram Group Join Now
  ‘ನಾನು ಮತ್ತು ಗುಂಡ 2’ ಚಿತ್ರಕ್ಕಂ ಡಾ.ವಿ.ನಾಗೇಂದ್ರಪ್ರಸಾದ್ ಶಿವನ ಮೇಲೆ ರಚಿಸಿರುವ ಹಾಗೂ ವಿಜಯಪ್ರಕಾಶ್ ದನಿಯಾಗಿರುವ  ‘ಓಂ ಶಿವಾಯ, ನಮೋ ಶಿವಾಯ’ ಹಾಡಿನ ಬಿಡುಗಡೆಯಾಗಿದೆ. ಸೆ. 5ರಂದು ಈ ಚಿತ್ರದ  ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ.
     ಸಮಾರಂಭದಲ್ಲಿ ಸಾಹಿತಿ ನಾಗೇಂದ್ರ ಪ್ರಸಾದ್ ಮಾತನಾಡುತ್ತಾ “ರಘುಹಾಸನ್ ಈ ಸಾಂಗ್ ಬಗ್ಗೆ ಹೇಳಿದಾಗ ತುಂಬಾ ವಿಷಯಗಳು ಇದರಲ್ಲಿವೆ ಎನಿಸಿತು, ಕಥೆ ಹೇಳಿದ ಹಾಗಿರಬಾರದು, ಆದರೆ ಲೈನ್ಸ್ ಕಥೆ ಹೇಳುವಂತಿರಬೇಕು, ಮನಸಿಗೆ ಇಳಿಯುವಂಥ ಕಂಟೆಂಟ್ ಈ ಹಾಡಲ್ಲಿದೆ, ಇದು ಪಕ್ಕಾ ಚಿತ್ರಗೀತೆ, ಸಿನಿಮಾದಲ್ಲಿ ನೋಡಿದಾಗ ತುಂಬಾ ಇಂಪ್ಯಾಕ್ಟ್ ಆಗುತ್ತೆ ಟ್ರೇಲರ್‌ನಲ್ಲಿ ಎಲ್ಲಾ ಎಮೋಷನ್ ಹೇಳುವ ಪ್ರಯತ್ನ ಮಾಡಿದ್ದಾರೆ” ಎಂದು ಹೇಳಿದರು.
     ನಿರ್ದೇಶಕ ರಘುಹಾಸನ್ “ನಮ್ಮ ಚಿತ್ರ 2022ರಲ್ಲಿ  ಪ್ರಾರಂಭವಾಗಿತ್ತು, ಇದೀಗ ಬಿಡುಗಡೆಯಾಗುತ್ತಿದೆ, ಹೊಡಿಬಡಿ ಕಥೆಗಳನ್ನು ಬಿಟ್ಟು ಭಾವನಾತ್ಮಕವಾಗಿ ಏನಾದರೂ ಮಾಡಬೇಕೆಂದಾಗ ಹುಟ್ಟಿದ್ದೇ ಗುಂಡನ ಕಥೆ, ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ ಸೂಚಿಸದೆ ‘ಯು/ಎ’ ಕೊಟ್ಟಿದೆ, ‘ನಾನು ಮತ್ತು ಗುಂಡ’ದ ಶಂಕರ ನಿಧನನಾದ ಮೇಲೆ ಆತನ ಮಗನಿಂದ ಭಾಗ 2ರಲ್ಲಿ ಕಥೆ ಕಂಟಿನ್ಯೂ ಆಗುತ್ತದೆ. ರಾಕೇಶ್ ಅಡಿಗ ಶಂಕರನ ಮಗನಾಗಿ ನಟಿಸಿದ್ದು, ಆತನಿಗೆ ನಾಯಿಯೇ ಪ್ರಪಂಚ. ಸೋಷಿಯಲ್ ಕನ್‌ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ”
ಎಂದು ತಿಳಿಸಿದರು. ರಘುಹಾಸನ್ ಚಿತ್ರದ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ.
     ನಾಯಕ ರಾಕೇಶ್ ಅಡಿಗ, ನಾಯಕಿ ರಚನಾ ಇಂದರ್, ಛಾಯಾಗ್ರಾಹಕ ತನ್ವಿಕ್, ಬಾಲನಟ ಜೀವನ್ ಚಿತ್ರದ ವಿಶೇಷತೆಗಳ ಕುರಿತು ಮಾತನಾಡಿದರು.
ಪಟ್ನಾಯಕ್ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತವಿದ್ದು, ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ.
   ಈ ಚಿತ್ರದಲ್ಲಿ ಡಾಗ್ ಸಿಂಬನ ಮಗ ನಟಿಸಿದ್ದಾನೆ. ಸಿಂಬ ನಾಲ್ಕು ದಿನವಷ್ಟೇ  ಶೂಟಿಂಗ್‌ನಲ್ಲಿ ಭಾವಹಿಸಿ ಮೃತನಾಗಿದ್ದ. ನಂತರ ಅವನ ಮಗ ಸಿಂಬ ನಟಿಸಿದ್ದಾನೆ.   ಅಲ್ಲದೆ  ಬಂಟಿ ಎಂಬ ನಾಯಿಯೂ   ನಟಿಸಿದೆ.
WhatsApp Group Join Now
Telegram Group Join Now
Share This Article