ಹಾಡು ಹೋಗಲೇ ಚಿನ್ನದ ಅಂಗಡಿಗೆ ನುಗ್ಗಿದ ಬಂದೂಕುದಾರಿಗಳ ದರೋಡೆ ಯತ್ನ ವಿಫಲ

Ravi Talawar
ಹಾಡು ಹೋಗಲೇ ಚಿನ್ನದ ಅಂಗಡಿಗೆ ನುಗ್ಗಿದ ಬಂದೂಕುದಾರಿಗಳ ದರೋಡೆ ಯತ್ನ ವಿಫಲ
WhatsApp Group Join Now
Telegram Group Join Now

ಅಥಣಿ: ಇಬ್ಬರು ಮುಸುಕು ದಾರಿಗಳಿಂದ ಚಿನ್ನದ ಅಂಗಡಿಗೆ ನುಗ್ಗಿ ಬಂದೂಕು ತೋರಿಸಿ ದರೋಡೆಗೆ ಯತ್ನಿಸಿ ವಿಫಲಗೊಂಡು ಅನಾಮಿಕ ದರೋಡೆಕೊರರು ಪರಾರಿಯಾಗಿರುವ ಘಟನೆ ಅಥಣಿಯಲ್ಲಿ ನಡೆದಿದೆ
ಅಥಣಿ ಪಟ್ಟಣದ ಹೃದಯ ಭಾಗದಲ್ಲಿರುವ ಹಳೆಯ ಪುರಸಭೆಯ ಬಳಿಯ ಜಿ ಎಮ್ ಆರ್ಕಿಕ್ಯಾಡ್ ಕಾಂಪ್ಲೇಕ್ಷನಲ್ಲಿರುವ ಮಂಗಳವಾರ ಮದ್ಯಾಹ್ನ ೨.೨೦ರ ಸುಮಾರಿಗೆ ತ್ರಿಮೂರ್ತಿ ಜ್ಯುವೆಲರ್ಸ್ ಚಿನ್ನದ ಅಂಗಡಿಗೆ ಇಬ್ಬರು ಮುಸುಕು ದಾರಿಗಳು ಬಂದೂಕು ತೋರಿಸಿ, ಮಾಲಿಕನ ಮೆಲೆ ಹಲ್ಲೆ ನಡೆಸಿ ದರೋಡೆ ಯತ್ನಿಸಿದ ಘಟನೆ ನಡೆದಿದೆ. ಚಿನ್ನದ ಗಡಿಯ ಮಾಲೀಕ ಮಹೇಶ ಪೋತದಾರ ಅವರ ಸಮಯ ಪ್ರಜ್ಞೆಯಿಂದ ಮತ್ತು ಕಿರಿಚಾಟ ನಡೆಸಿದ್ದರಿಂದ ಹೆದರಿದ ಇಬ್ಬರು ದರೋಡೆಕರರು ಅಂಗಡಿಯಿAದ ಓಡಿ ಹೋಗಿ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ ವೇಳೆ ಸ್ಥಳಿಯರಿಗೆ ಬಂದೂಕು ತೋರಿಸಿದ್ದರಿಂದ ಯಾರು ಅವರನ್ನು ತಡೆಯಲು ಮುಂದಾಗಲು ಸಾದ್ಯವಾಗಿಲ್ಲ. ನಂತರ ಅಲ್ಲಿಂದ ಬೈಕ್ ನಲ್ಲಿ ಇಬ್ಬರು ಪರಾರಿಯಾಗಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹೇಶ ಪೋತದಾರ ಅವರಿಗೆ ಸೇರಿದ ಚಿನ್ನದ ಅಂಗಡಿಯಲ್ಲಿ ಘಟನೆ ನಡೆದಿದೆ. ಪ್ರಮುಖವಾಗಿ ದರೋಡೆಕೋರ ಅಂಗಡಿಗೆ ನುಗ್ಗುವ ವೇಳೆ ಶೇಟರ್ ಬಂದ್ ಮಾಡಲು ಯತ್ನಿಸುದ್ದಾರೆ ಆದರೆ ಶೆಟರ್ ಬಂದ್ ಆಗದೆ ಇರುವದರಿಂದ ಅನಾಹುತ ಘಟನೆ ತಪ್ಪಿದಂತಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸ್‌ರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸಿ ಅದರ ಆಧಾರದ ಮೇಲೆ ದರೋಡೆಕೋರ ಪತ್ತೆಗೆ ಬಲೆ ಬಿಸಿದ್ದಾರೆ. ಘಟನೆ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

WhatsApp Group Join Now
Telegram Group Join Now
Share This Article