ಸಂಕೇಶ್ವರ : ವಾರ್ಡ ನಂ18 ರಲ್ಲಿ ಡಿ.ಫಾರ್ಮಿಸಿ ಕಾಲೇಜಿನ ಹಿಂಭಾಗದಲ್ಲಿ ನೂತನವಾಗಿ ಲಕ್ಷ್ಮಿಬಾಯಿ ತಾಳಿಕೋಟಿ ( ಎಲ್.ಟಿ. ನಗರ )ಎಂದು ನಾಮ ಫಲಕವನ್ನು ಹಿರಿಯರಾದ ಅಬ್ಬಾಸ್ ಇಸ್ಮಾಯಿಲ್ ಶೇಕ್ ಇವ ಹಸ್ತದಿಂದ ಉದ್ಘಾಟಿಸಲಾಯಿತು.
ನಂತರ ಪುರಸಭೆಯ ಸದಸ್ಯರಾದ ವಿನೋದ ನಾಯಿಕ ಅವರು ಮಾತನಾಡಿ 1997 ರಲ್ಲಿ ಲಕ್ಷ್ಮಿ ಬಾಯಿ ತಾಳಿಕೋಟಿ ಅವರು ಪುರಸಭೆಗೆ ತಮ್ಮ ಜಾಗೆಯನ್ನು ದಾನವಾಗಿ ನೀಡಿದ್ದು, ಆದ ಕಾರಣ ಸರಕಾರದ ವತಿಯಿಂದ ನಮಗೆ ಮನೆಗಳು ಮಂಜೂರಾದವು, ಈ ಜಾಗೆಯನ್ನು ನೀಡಿದವರ ಹೆಸರನ್ನು ನೆನಪಿಸುವ ಉದ್ದೇಶದಿಂದ ಈ ಪ್ರದೇಶಕ್ಕೆ ಎಲ್.ಟಿ. ನಗರ ಎಂದು ಹೆಸರನ್ನು ಇಡಲಾಗಿದೆ ಎಂದರು.
ಮುಖಂಡರಾದ ಸಂತೋಷ ಸತ್ಯನಾಯಿಕ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ಜರುಗಿತು. ಈ ಸಂಧರ್ಭದಲ್ಲಿ ಮಹೇಶ ಕರಿಶೆಟ್ಟಿ, ಸಂಜಯ ಕರಜಗಿ, ಸುನೀಲ್ ದಿಂಡೆ, ಅವಿನಾಶ ಚವ್ಹಾನ, ರೋಹಿತ ಘಸ್ತಿ, ಮಹೇಶ ಪಾತರೋಟ, ರಾಹುಲ ವಾರಕರಿ, ಓಂಕಾರ ಮೆಲಗೇರಿ, ದೀಪಕ ಸುತಾರ, ಸಲೀಮ ತಹಶಿಲ್ದಾರರ, ಮುನ್ನಾ ಪಟೇಲ್, ಭೀಮಪ್ಪಾ ಸಾರಾಪೂರೆ, ನಿಯಾಜ ಮಕಾಂದಾರ, ಶಾಮ ಕಾಂಬಳೆ ಸೇರಿದಂತೆ ಹಾಜರಿದ್ದರು.