ಧಾರವಾಡ: ಪವಿತ್ರ ಪುಣ್ಯ ಕ್ಷೇತ್ರ ಧರ್ಮಸ್ಥಳದ ಮೇಲೆ ಮತ್ತು ಧರ್ಮಾಧಿಕಾರಿಯಾದ ಶ್ರೀ ವೀರೇಂದ್ರ ಹೆಗಡೆಯವರ ಮೇಲೆ ನಡೆಯುತ್ತಿರುವ ಷಂಡ್ಯಂತ್ರದ ಆಪಾದನೆಗಳು, ಕ್ಷೇತ್ರದ ಹೆಸರು ಹಾಳು ಮಾಡುವ ಕಾರ್ಯ, ಧರ್ಮಸ್ಥಳದ ವಿರುದ್ಧ ಕಾಂಗ್ರೆಸ್ ಸರ್ಕಾರದ ದುರಾಡಳಿತ ನೀತಿಗಳ ವಿರುದ್ಧ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಮಹಾನಗರ ವತಿಯಿಂದ ಜರುಗಿದ “ಧರ್ಮದ ಉಳಿವಿಗಾಗಿ ಧರ್ಮ ಯುದ್ದ” ಪ್ರತಿಭಟನೆಯಲ್ಲಿ ಭಾಗವಹಿಸಿ ಧಾರವಾಡದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗು ಜರುಗಿದ ಬೃಹತ ಪಾದಯಾತ್ರೆಯಲ್ಲಿ ಮಾಜಿಮಹಾಪೌರರು ಸಭಾನಾಯಕರು ಪಾಲ್ಗೊಂಡರು
ಅಧರ್ಮದ ವಿರುದ್ಧ ಧರ್ಮ ಕೊನೆಗೂ ದಿಗ್ವಿಜಯ ಸಾಧಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರಚಿಸಿದ್ದ ರಾಕ್ಷಸರೆಲ್ಲರೂ ದೈವದ ಎದುರು ನಾಮಾವಶೇಷವಾಗುವುದು ನಿಶ್ಚಿತ.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರು ತಿಪ್ಪಣ್ಣ ಮಜ್ಜಗಿ ಮಾಜಿಮಹಾಪೌರರು ಈರೇಶ ಅಂಚಟಗೇರಿ ನಿಂಗಪ್ಪ ಸುತಗಟ್ಟಿ ಮಾಜಿ ಶಾಸಕರು ಸೀಮಾ ಮಸೂತಿ ರಾಜಣ್ಣ ಕೊರವಿ ಶಿವು ಹಿರೇಮಠ ಶಂಕರ ಶೆಳಕೆ ಶಂಕರ ಕೊಮಾರದೇಸಾಯಿ ವಿಜಯಾನಂದ ಶೆಟ್ಟಿ ಮೊಹನ ರಾಮದುರ್ಗ ಶ್ರೀನಿವಾಸ ಕೋಟ್ಯಾನ ಮಹಾನಗರ ಪಾಲಿಕೆಯ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಪಕ್ಷದ ಸರ್ವ ಸದಸ್ಯರು ಮತ್ತು ಸಾರ್ವಜನಿಕರು ಹಾಜರಿದ್ದರು.