ರಾಯಬಾಗ: ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಕ್ರೀಡಾಕೂಟಗಳನ್ನು ಬೆಳೆಸಬೇಕೆಂದು ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ ಹೇಳಿದರು.
ಮಂಗಳವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ಶಾಲಾ ಶಿಕ್ಷಣ ಇಲಾಖೆ ರಾಯಬಾಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿನ ಕ್ರೀಡಾ ಪಟುಗಳು ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಜಯಗಳಿಸಿ, ತಾಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕೆಂದರು.
ರಾಯಬಾಗ ಗ್ರಾಮೀಣ ಗ್ರಾ.ಪಂ.ಅಧ್ಯಕ್ಷೆ ಮಹಾದೇವಿ ದೀಪಾಳೆ, ಉಪಾಧ್ಯಕ್ಷೆ ಬೇಗಂ ಶಿಂಗೆ, ಪ.ಪಂ.ಸದಸ್ಯ ಸುರೇಶ ಮಾಳಿ, ಕ್ರೀಡಾ ಇಲಾಖೆ ತಾಲೂಕಾಧಿಕಾರಿ ಸಂಜೀವಕುಮಾರ ನಾಯಿಕ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಾಹಾವೀರ ಜೀರಗ್ಯಾಳ, ಬಿ.ಆರ್.ಸಿ ಬಸವರಾಜ ಕಾಂಬಳೆ, ಎಲ್.ಬಿ.ಬನಶಂಕರಿ , ಜೆಡ್.ಆರ್ ಮುಲ್ಲಾ, ರಾಜು ಅರಬಳ್ಳಿ, ವ್ಹಿ.ಡಿ.ಉಪಾಧ್ಯೆ ಹಾಗೂ ದೈಹಿಕ ಶಿಕ್ಷಕರು ಮತ್ತು ಕ್ರೀಡಾ ಪಟುಗಳು ಇದ್ದರು.