ಅಥಣಿ: ಬಡವರ, ಅಸಹಾಯಕರ, ಅನಾರೋಗ್ಯ ಪೀಡಿತರಿಗಾಗಿ ಸಹಾಯ ಮಾಡುವುದು ಲಯನ್ಸ್ ಕ್ಲಬ್ ಉದ್ದೇಶವಾಗಿವೆ. ಅನೇಕ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಸಮಾಜಮುಖಿ ಸೇವೆಗಳಿಂದ ಮನೆ ಮಾತಾಗಿದೆ ಎಂದು ೩೧೭ ಬಿ ಜಿಲ್ಲಾ ಪ್ರಾಂತುಪಾಲ ಜೈಮೋಲ ನಾಯಿಕ ಹೇಳಿದರು.
ಪಟ್ಟಣದ ರಾಯಲ್ ಭವನದಲ್ಲಿ ಲಯನ್ಸ್ ಕ್ಲಬ್ ಪ್ರಾರಂಭೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಸನ್ ೧೯೧೭ರಲ್ಲಿ ಅಮೆರಿಕಾದಲ್ಲಿ ಸ್ಥಾಪನೆಯಾಯಿತು. ವಿಶ್ವದ ೨೦೭ ದೇಶಗಳಲ್ಲಿ ೧೭ ಲಕ್ಷ ಸದಸ್ಯರಿದ್ದಾರೆ. ಭಾರತದಲ್ಲಿ ೫ ಸಾವಿರ ಕ್ಲಬ್‌ಗಳು ಸಾಮಾಜಿಕ ಸೇವೆಯಲ್ಲಿ ತೊಡಗಿವೆ. ಒಳ್ಳೆಯ ಯೋಜನೆಗಳಿದ್ದರೆ ಅನುದಾನ ಮಂಜೂರಾತಿಗೆ ಅಂತರರಾಷ್ಟ್ರೀಯ ದೇಣಿಗೆದಾರರಿಗೆ ಕಳುಹಿಸಿ ಕೊಡಲಾಗುವುದು. ಅನುದಾನ ಸದ್ಬಳಕೆಯಾಗಿ ಸಮಾಜಕ್ಕೆ ಒಳ್ಳೆಯದಾಗಬೇಕು. ಕರ್ನಾಟಕದಿಂದ ಬರುವ ಎಲ್ಲ ಯೋಜನೆಗಳಿಗೆ ಅನುದಾನ ದೊರಕಿಸಿಕೊಡಲು ಪ್ರಾಮಾಣಿಕ ಪ್ರೇಯತ್ನ ಮಾಡಲಾಗುವದು ಎಂದು ಹೇಳಿದರು
ನೂತನ ಸಂಸ್ಥಾಪಕ ಅಧ್ಯಕ್ಷರಾಗಿ ರಮೇಶ ಬುಲಬುಲೆ ಮಾತನಾಡಿ ಲಯನ್ಸ್ ಕ್ಲಬ್ ಕೇವಲ ಒಂದು ಸಂಘಟನೆಯಲ್ಲ, ಇದು ಸ್ನೇಹದ ಸೇತುವೆ ಮತ್ತು ಸಮಾಜಮುಖಿ ಚಟುವಟಿಕೆಗಳ ದ್ವೀಪ ಸ್ತಂಭ. ನಾವೆಲ್ಲರೂ ಸೇವಾ ಮನೋಭಾವನೆಯಿಂದ ಬಡವರಿಗೆ ನೆರವು, ಯುವಶಕ್ತಿಗೆ ಪ್ರೇರಣೆ, ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸುವ ಸಂಕಲ್ಪ ಹೊಂದಿದ್ದೇವೆ ಎಂದು ಹೇಳಿದರು
ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ್ದ ಡಾ. ಕೀರ್ತಿ ನಾಯಿಕ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಅಥಣಿಯ ನೂತನ ಅಧ್ಯಕ್ಷರಾಗಿ ರಮೇಶ ಬುಲಬುಲೆ, ಕಾರ್ಯದರ್ಶಿಯಾಗಿ ವಿನೋದ ಕಲಮಡಿ,ಖಜಾಂಚಿಯಾಗಿ ಅಶೋಕ ಹೊಸೂರ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು.
ಈ ವೇಳೆ ಅತಿಥಿಗಳಾಗಿ ಮಹಾಲಿಂಗಪುರದ ಲಯನ್ಸ್ ಕ್ಲಬ್ ನ ಸಿದ್ದು ನಕಾತಿ, ವಿದ್ಯಾ ದಿನ್ನಿಮನಿ, ಪ್ರಶಾಂತ್ ಅಂಗಡಿ, ರಾಜು ತಾಳಿಕೋಟಿ ಸೇರಿದಂತೆ ಅಥಣಿ ಲಯನ್ಸ್ ಕ್ಲಬ್ ನಿರ್ದೇಶಕರಾದ ಚಿದಾನಂದ ಸವದಿ, ಮಹೇಶ್ ಕಾಪಸೆ, ರವೀಂದ್ರ ಗಾವಡೆ, ಕಿರಣ ಶಿರಗುಪ್ಪಿ, ಶಶಿಕಾಂತ ಹುಲಕುಂದ, ಮಹಾದೇವ ನಾಯಿಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಆನಂದ ಟೋಣಪಿ ಸ್ವಾಗತಿಸಿದರು. ಸಂಜೀವ ಪಾಂಚಾಲ ನಿರೂಪಿಸಿದರು. ವಿನೋದ ಕಲಮಡಿ ವಂದಿಸಿದರು.