ಮಂಗಳೂರು, ಆಗಸ್ಟ್ 26: ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೊಂಡು ಮೊದಲ ಬಾರಿಗೆ ದೂರು ನೀಡುವಾಗ ಮಾಸ್ಕ್ಮ್ಯಾನ್ ಚಿನ್ನಯ್ಯ ತಂದಿದ್ದ ತಲೆಬುರುಡೆಯ ರಹಸ್ಯ ಈಗ ಬಯಲಾಗಿದೆ. ಬುರುಡೆ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್ಎಲ್/ FSL) ಪರೀಕ್ಷೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಹೆಣ್ಣುಮಗಳ ತಲೆಬುರುಡೆ ಎಂದು ತಂದಿದ್ದ ಚಿನ್ನಯ್ಯ, ಇದೇ ರೀತಿ ನೂರಾರು ಶವಗಳನ್ನು ಹೂತುಹಾಕಿದ್ದೇನೆ ಎಂದಿದ್ದ. ಇದೀಗ ಮೊದಲ ಬುರುಡೆಯ ಅಸಲಿಯತ್ತು ಬಯಲಾಗಿದೆ. ಚಿನ್ನಯ್ಯ ತಂದಿದ್ದ ಬುರುಡೆ 25-30 ವರ್ಷದೊಳಗಿನ ಪುರುಷನದ್ದು ಎಂದು ಎಫ್ಎಸ್ಎಲ್ ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ.