ಬಳ್ಳಾರಿ26.. : ರಕ್ತದಾನ ಎಲ್ಲ ದಾನ ಕಿತ್ತಲು ಶ್ರೇಷ್ಠವಾದದ್ದು ಮತ್ತು ಅಮೂಲ್ಯವಾದದು ಅನ್ನದಾನ ಅಕ್ಷರ ದಾನ ಜೀವನ ಕೊಟ್ಟರೆ ರಕ್ತದಾನ ಜೀವವನ್ನೇ ಕೊಡುತ್ತದೆ, ಯಾವುದೇ ಆತಂಕವಿಲ್ಲದೆ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಕನಿಷ್ಠ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಜಿಲ್ಲಾ ಶಸ್ತ್ರಚಿಕಿಸ್ತಕ ಡಾಕ್ಟರ್ ಬಸರೆಡ್ಡಿ ಎನ್ ಕರೆ ಕೊಟ್ಟರು.
ಅವರು ಇಂದು ನಗರದ ಈಶ್ವರಿ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡುವುದರಿಂದ ವ್ಯಕ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ ಬದಲಾಗಿ ಹೊಸ ರಕ್ತಗಣಗಳ ಉತ್ಪತ್ತಿಯಿಂದ ಮನುಷ್ಯನು ಲವಲವಿಕೆಯಿಂದ ಇರಬಹುದು ಮತ್ತು ಆರೋಗ್ಯದಿಂದ ಸಹ ಇರಬಹುದು ರಕ್ತದಾನ ಮಾಡಲು ಯಾರು ಹಿಂಜರಿಯಬಾರದು ಎಂದು ರಕ್ತದಾನಿಗಳ ಆತಂಕವನ್ನು ದೂರ ಮಾಡಿದರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹಾಪೌರರಾದ ಮುಲ್ಲಂಗಿ ನಂದೀಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಯಶವಂತ್ ನಾಗಿ ರೆಡ್ಡಿ, ಪಾಲಕೆ ಸದಸ್ಯ ಮೋದ್ಕರ್ ಶ್ರೀನಿವಾಸ್, ಡಾ. ಅರುಣ ಕಾಮಿನೇನಿ, ದೇವಣ್ಣ, ಮೇಧಾ ಕಾಲೇಜಿನ ಅಧ್ಯಕ್ಷರಾದ ರಾಮ್ ಕಿರಣ್ ಸೇರಿದಂತೆ ಇತರರಿದ್ದರು.