ಬಳ್ಳಾರಿ: ೧೯೯೫ರ ನಂತರದ ಕಲ್ಯಾಣ ಕರ್ನಾಟಕದ ಎಲ್ಲಾ ಅನುದಾನ ರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಹಾಗೂ ಇತರೆ ಬೇಡಿಕೆ ಕುರಿತು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮುಖಾಂತರ ಸಿಎಂ ಸಿದ್ದರಾಮಯ್ಯನವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ತಾಂಡವ ಕೃಷ್ಣ, ಖಜಾಂಚಿಗಳಾದ ಖಜಾಂಚಿ ಹುಲಿಗೇಶ್, ಯಮುನಪ್ಪ ನಂದಿಹಾಳ ( ಮುತ್ತಣ್ಣ) ಸಹ ಕಾರ್ಯದರ್ಶಿ ಬಡಿಗೇರ್ ಜಿಲಾನಸಾಬ್, ಸಂಘಟನಾ ಕಾರ್ಯದರ್ಶಿಯಾದ ಊ. ಕಾಲ್. ರಾಮಕೃಷ್ಣ, ಕಾನೂನು ಸಲಹೆಗಾರರಾದ ಕೆ. ಶಂಕ್ರಪ್ಪ, ಜಿಲ್ಲಾಧ್ಯಕ್ಷರಾದ ಬಸವರಾಜ ಸೇರಿದಂತೆ ಇತರರು ಉಪಸಿದ್ಧರಿದ್ದರು