ಯುವ ಜನತೆಗೆ ಭವಿಷ್ಯತ್ವದಲ್ಲಿ ಕ್ರೀಡೆ ವರದಾನ : ಮಹಾಂತೇಶ ಬಸ್ಸಾಪುರೆ

Ravi Talawar
ಯುವ ಜನತೆಗೆ  ಭವಿಷ್ಯತ್ವದಲ್ಲಿ ಕ್ರೀಡೆ ವರದಾನ : ಮಹಾಂತೇಶ ಬಸ್ಸಾಪುರೆ
WhatsApp Group Join Now
Telegram Group Join Now

ಹುಕ್ಕೇರಿ; ದೈಹಿಕ ಹಾಗೂ ಸದೃಢ ಆರೋಗ್ಯಕ್ಕಾಗಿ ಕ್ರಿಡೆಗಳು ವಿದ್ಯಾರ್ಥಿಗಳಿಗೆ ವರದಾನ ಆದರೆ ಇಂದು ವಿದ್ಯಾರ್ಥಿಗಳು ಕ್ರೀಡೆಗಳಿಂದ ವಿಮುಖರಾಗುತ್ತಿರುವದು ಕಳವಳಕರ ಸಂಗತಿ ಎಂದು ಸಿಪಿಐ ಮಹಾಂತೇಶ ಬಸಾಪುರೆ ಹೇಳಿದರು.

ಅವರ ಪಟ್ಟಣದ ಹೊರವಲಯದ ಕ್ಯಾರಗುಡ್ಡದ ತಾಲೂಕಾ ಕ್ರೀಡಾಂಗಣದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರಿಢಾ ಇಲಾಖೆ ಆಶ್ರಯದಲ್ಲಿ ಎರಡ ದಿನ ಜರುಗಿದ ಹುಕ್ಕೇರಿ ತಾಲೂಕಾ ಮಟ್ಟದ ದಸರಾ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರಿಡಾ ಪಟುಗಳಿಗೆ ಸರಕಾರ ನೇಮಕಾತಿಯಲ್ಲಿ ಮೀಸಲಾತಿ ನಿಗದಿ ಮಾಡಿರುವದರಿಂದ ಕ್ರೀಡೆ ವರದಾನವಾಗಿದೆ ಎಂದರು.

ಕ್ಷೇತ್ರ ಸಮನ್ವದಿಕಾರಿ ಎ.ಎಸ್ ಪದ್ಮನ್ನವರ, ಮಾತನಾಡಿ ಇಂದು ಇಂದು ಮಕ್ಕಳು ಹೊರಾಂಗಣ ಆಟಕ್ಕಿಂತ ಮನೆಯೊಳಗಿನ ಮೋಬೈಲ್ ಆಟಕ್ಕೆ ಅಂಟಿಕೊಳ್ಳುತ್ತಿರುವದು . ಕಾರಣ ಪಾಲಕರು ಮಕ್ಕಳ ಬಗ್ಗೆ ಗಮನಹರಿಸಬೇಕು. ಎಂದರು.

ರಾಜ್ಯ ಸರಕಾರಿ ನೌಕರರ ತಾಲೂಕಾ ಅಧ್ಯಕ್ಷ ಅವಿನಾಶ ಹೊಳೆಪ್ಪಗೋಳ ಮಾತನಾಡಿ ಮಕ್ಕಳಿಗೆ ಇಂದು ಕೇವಲ ಕ್ರಿಕೇಟ ನೋಡುವದು ಹವ್ಯಾಸವಾಗಿದೆ. ಮೊದಲು ದೇಶಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಸಿ ಸೋಲು ಗೆಲವು ಮುಖ್ಯವಲ್ಲ ಎಂದು ಹೇಳಿದರು.

ಕೊಟಬಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ಭೂಸಾರಿ ಅಧ್ಯಕ್ಷತೆ ವಹಿಸಿದ್ದರು.ತಾಲೂಕಾ ಕ್ರಿಡಾ ಅನುಷ್ಟಾನ ಅಧಿಕಾರಿ ಹಾಗೂ ಅಂತರಾಷ್ಟ್ರಿಯ ಕ್ರೀಡಾ ಪಟು ಕುತುಜಾ ಮಲ್ತಾನಿ ಮಾತನಾಡಿ ಕ್ರ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಅರೋಗ್ಯಕರವಾಗಿ ಸ್ಪರ್ಧೇ ಮಾಡಬೇಕು. ಯುವತಿಯರಿಗೂ ರಾಷ್ಠ್ರಮಟ್ಟದವರಿಗೂ ಕ್ರೀಡೆಯಲ್ಲಿ ಭಾಗವಹಿಸಿವ ಅವಕಾಶಗಳಿವೆ ಎಂದರು.
ತಾಲೂಕಾ ದೈಹಿಕ ಶಿಕ್ಷಣ ಪರೀವಿಕ್ಷಕರಾದ ಎ. ಆಯ್ ಕೋಟಿವಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ತರಬೇತಿದಾರ ರೋಹಿಣಿ ಪಾಟೀಲ , ತಾಲೂಕಾ ಕ್ರೀಡಾ ಸಂಯೋಜಕ ಚಂದ್ರಕಾಂತ ವಾರಕರಿ, ಹಾಲಪ್ಪಾ ಮಗದಮ್ಮ, ದೈಹಿಕ ಶಿಕ್ಷಕರಾದ ಬಿ.ಕೆ ದೊಡಮನಿ, ಆರ.ಎಮ್ ನರಸಾಯಿ, ಬಿ ಕಡಲಗಿ, ರಮೇಶ ಕಾಂಬಳೆ, ಬಿ. ಎನ್ ಚೌಗಲಾ, ಎಸ್ ಟಿ ಮಣ್ನಿಗೇರಿ, ಮುಬಾರಕ ಸನದಿ ಸಂಗಮೇಶ ಶಿವಣ್ಣಗೋಳ, ಎಮ್ . ಹಿರೇಮಠ ಎನ ನೇರ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಹುಕ್ಕೇರಿ ತಾಲೂಕಾ ಮಟ್ಟದ ದಸರಾ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ ಸಿಪಿಐ ಮಹಾಂತೇಶ ಬಸ್ಸಾಪುರೆ.ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಅವಿನಾಶ ಹೊಳೆಪ್ಪಗೋಳ ,ಕ್ರೀಡಾ ಇಲಾಖೆಯ ಕುತುಜಾ ಮಲ್ತಾನಿ, ರೋಹಿಣಿ ಪಾಟೀಲ ಎ.ಐ ಕೋಟಿವಾಲೆ ಮತ್ತಿತರರು ಉಪಸ್ಥಿತರಿದ್ದರು.

 

 

 

WhatsApp Group Join Now
Telegram Group Join Now
Share This Article