ಗದಗ : ಕ್ರೀಡಾ ಚಟುವಟಿಕೆಗಳು, ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಮಾನಸಿಕ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಹಾಗೂ ಯುವಕರು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ರೋಹನ ಅವರು ಕರೆ ನೀಡಿದರು.
ಶ್ರೀಯುತರು ಸಂಕನೂರ ಗ್ರುಪ್ ಆಫ್ ಇನ್‌ಸ್ಟಿಟ್ಯೂಷನ್ ಹಾಗೂ ಲಾನ್ ಟೆನ್ನಿಸ್ ಅಸೋಸಿಯೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ೭೯ ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಂಕನೂರ ನರ್ಸಿಂಗ್ ಇನ್‌ಸ್ಟಿಟ್ಯೂಟ್‌ದಲ್ಲಿ ಏರ್ಪಡಿಸಿದ ಟೆನ್ನಿಸ್ ಕ್ರೀಡಾಕೂಟದ ಉದ್ಘಾಟಕರಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ ಎನ್.ಸಿ.ಸಿ. ಅಧಿಕಾರಿ ಭುವನ ಖರೆ ಮಾತನಾಡಿ ಸಂಕನೂರ ನರ್ಸಿಂಗ್ ಇನ್‌ಸ್ಟಿಟ್ಯೂಟ್‌ನವರು ಅತ್ಯುತ್ತಮವಾದ ಲಾನ್ ಟೆನ್ನಿಸ್ ಕ್ರೀಡಾಂಗಣ ನಿರ್ಮಿಸಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲೊಂಡಿದ್ದ ಉಪಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ಕುಮಾರ ಕೆಂಚಪ್ಪನವರು ಸಂದಂರ್ಭೋಚಿತವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರದ ಅತ್ಯಂತ ಹಿರಿಯ ಲಾನ್ ಟೆನ್ನಿಸ್ ಕ್ರೀಡಾಪಟುಗಳಾದ ಡಾ. ಜೆ.ಸಿ. ಶಿರೋಳ, ಮತ್ತು ನಿವೃತ್ತ ಪ್ರಾಧ್ಯಾಪಕರು ಗಂಗಾಧರ ಥಡಿ ಅವರನ್ನು ಸನ್ಮಾನಿಸಲಾಯಿತು. ಈ ಕ್ರೀಡಾಕೂಟದಲ್ಲಿ ಒಟ್ಟು ೪೦ ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ ರಘು ಮೇರವಾಡೆ ಅವರ ತಂಡವು ಗೆಲವು ಸಾಧಿಸಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪ್ರಕಾಶ ಸಂಕನೂರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ. ವಿದ್ಯಾನಂದ ನಾಯಕ, ಡಾ. ಗುರುಪ್ರಸಾದ ಡಾ. ಶ್ರೀಧರ ಕುರಡಗಿ, ಡಾ. ಆದಿತ್ಯ ಗೋಡಖಿಂಡಿ, ಡಾ. ಸಿದ್ಧಾರ್ಥ, ಡಾ. ಹನಮಂತ ಮಾಲಿ, ಡಾ. ಶಶಾಂಕ ಶಿರೋಳ, ಡಾ. ರಾಹುಲ ಶಿರೋಳ, ಡಾ. ಇಂದುಶೇಖರ ಬಳ್ಳಾರಿ, ಡಾ. ವಿರೇಶ ವಿಜಾಪೂರ ಕ್ರೀಡಾ ತರಬೇತುದಾರರು ಶ್ರೀನಿವಾಸ ಬದಿ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪಪ್ರಾಚಾರ್ಯರು ವಿನ್ಸೆಂಟ್ ಪಾಟೀಲ ಸ್ವಾಗತಿಸಿದರು, ಡಾ. ಪವನ ಪಾಟೀಲ ವಂದನಾರ್ಪಣೆ ಮಾಡಿದರು.