ಸದೃಢ ಹಲ್ಲುಗಳಿಗಾಗಿ ಕಪ್ಪು ಹಲ್ಲಿನ ಪುಡಿಯಿಂದ ಹಲ್ಲು ಉಜ್ಜಿರಿ: ಕುಮಾರ ರಡ್ಡೇರ

Ravi Talawar
ಸದೃಢ ಹಲ್ಲುಗಳಿಗಾಗಿ ಕಪ್ಪು ಹಲ್ಲಿನ ಪುಡಿಯಿಂದ ಹಲ್ಲು ಉಜ್ಜಿರಿ:  ಕುಮಾರ ರಡ್ಡೇರ
WhatsApp Group Join Now
Telegram Group Join Now

 

ನೇಸರಗಿ. ಗಿಡಮೂಲಿಕೆಗಳಿಂದ   ತಯಾರಿಸಿದ ಕಪ್ಪು ಹಲ್ಲಿನ ಪುಡ್ಡಿಯನ್ನು ದಿನನಿತ್ಯ ಬಳಕೆಯಿಂದ ಹಲ್ಲುಗಳು ಸದೃಢವಾಗಿ ಗಟ್ಟಿಮುಟಿಯಾಗಿ ಯಾವುದೇ ತೊಂದರೆ ಇಲ್ಲದೆ ಸದೃಢವಾಗಿರುತ್ತವೆ ಮತ್ತು ದೇಶೀ ಅಕಳಿನ ಶುದ್ಧ ತುಪ್ಪ ದಿನನಿತ್ಯ ಬಳಕೆಯಿಂದ ಮಾನವನ ಶರೀರವು ಸಾದ್ರಾಡವಾಗಿರುತ್ತದೆ ಎಂದು ಶ್ರೀ ವರದಶ್ರೀ ಫೌಂಡೇಷನ್ ಸ್ವಯಂ ಸೇವಕರಾದ  ಕುಮಾರ ಶಂ ರಡ್ಡೇರ  ಹೇಳಿದರು.
    ಅವರು ಸೋಮವಾರದಂದು  ಗ್ರಾಮದ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಮಠದಲ್ಲಿ ಆಯೋಜಿಸಲಾಗಿದ್ದ ಸಿದ್ದಿ ಕಣ್ಣಿನ ರಸ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಇ ಸಂದರ್ಭದಲ್ಲಿ  ವರದಶ್ರೀ ಫೌಂಡೇಷನ್ ಸ್ವಯಂ ಸೇವಕರಾದ ವಿಶ್ವನಾಥ ಸಣ್ಣಗೌಡರ, ಈರಣ್ಣ ಅಂಗಡಿ, ಅಭಿಷೇಕ ಚೌಹಾನ, ಅಭಿಷೇಕ ಪಾಟೀಲ, ಬಾಬು ವಂಟಗುಡಿ ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಎಲ್ಲ ಭಾಗಗಳಿಂದ ಬಂದ ಅನೇಕ ಜನ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article