ನೇಸರಗಿ: ವಿಶ್ವಗುರು ಅಣ್ಣ ಬಸವಣ್ಣ ಅವರು ಸರ್ವ ಜನಾಂಗದ ಒಳಿತಿಗಾಗಿ ಹೋರಾಟ ಮಾಡಿ, ಸಮಾನತೆಗೆ ಶ್ರಮಿಸಿದ್ದ ಮಹಾನ ನಾಯಕರಾಗಿದ್ದು ಅವರ ವಚನ,ಮಾಡಿದ ಕಾರ್ಯ ಜನರಿಗೆ ತಿಳಿಸಿ ಹೇಳಿ ಜನರ ಮನಸಿನಲ್ಲಿ ಆದರ್ಶ ತತ್ವಗಳನ್ನು ಮೂಡಿಸಲು ನಾವೆಲ್ಲರೂ ಕಾರ್ಯ ಮಾಡಬೇಕೆಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಇಲ್ಲಿನ ಬೆಳಗಾವಿ ಬಾಗಲಕೋಟ ಹೆದ್ದಾರಿಯ ನೇಸರಗಿ ಕ್ರಾಸ ಹತ್ತಿರ ಶ್ರೀ ಬಸವೇಶ್ವರ ನಾಮಫಲಕ ಉದ್ಘಾಟನೆ ಹಾಗೂ ಶ್ರೀ ಬಸವೇಶ್ವರ ಭಾವಚಿತ್ರ ಅನಾವರಣ ನೆರವೇರಿಸಿ ಮಾತನಾಡಿದರು.
ಬಳಗಾವಿ – ನಾಗನೂರ ರುದ್ರಾಕ್ಷಿ ಮಠದ ಡಾ. ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ಸಾರ್ವಜನಿಕರು ಶ್ರೀ ಬಸವೇಶ್ವರ ಅವರ ನೀತಿ, ತತ್ವಗಳನ್ನು ಜೀವನದಲ್ಲಿ ಅಳವಡಿಕೊಂಡು ಆದರ್ಶ ಜೀವನ ನಡೆಸಿ ಮುಂದೆ ಬರಬೇಕು ಎಂದರು.
ನೇಸರಗಿ ಮಲ್ಲಾಪೂರ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಕಲಾವಿದ ಫಕ್ಕಿರಪ್ಪಾ ಸೋಮಣ್ಣವರ ಅವರು ಇಂತಹ ಸತ್ಕಾರ್ಯ ಮಾಡುವದರಲ್ಲಿ ಶ್ರಮ ವಹಿಸುತ್ತಾರೆ ಬಸವೇಶ್ವರ ರೀತಿ, ನೀತಿ ಆಚರಣೆಯಲ್ಲಿ ಅವರ ಸೇವೆ ಅಪಾರ ಎಂದರು.
ಕಾರ್ಯಕ್ರಮದಲ್ಲಿ ಶರಣಪ್ರಭು ಮಹಾಸ್ವಾಮಿಗಳು, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ರೊಟ್ಟಿ,ವಿ ಕೆ. ಪಾಟೀಲ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ನಿಂಗಪ್ಪ ಅರಿಕೇರಿ,ಕಲಾ ಶಿಕ್ಷಕ ಫಕ್ಕಿರಪ್ಪ ಸೋಮಣ್ಣವರ, ಬಾಳಪ್ಪ ಮಾಳಗಿ, ನಿಂಗಪ್ಪ ತಳವಾರ, ಮಲ್ಲಿಕಾರ್ಜುನ ಹಸಬಿ, ಶಿಕ್ಷಕ ರಾಜಶೇಖರ ಗೆಜ್ಜಿ, ಸುರೇಶ ಅಗಸಿಮನಿ, ಶಿವನಪ್ಪ ಮಾದೇನ್ನವರ, ಫಕ್ಕಿರಪ್ಪ ಸೋಮಣ್ಣವರ,ಮಲ್ಲಿಕಾರ್ಜುನ ಸೋಮಣ್ಣವರ, ಮಕಬುಲ್ ಬೇಪಾರಿ, ಯಮನಪ್ಪ ಪೂಜೇರಿ,ಸುಜಾತ ಪಾಟೀಲ, ಕೆಂಚಪ್ಪ ಕಲಿಬಡ್ಡಿ, ರಾಯನಗೌಡ ಪಾಟೀಲ, ನಾಗನಗೌಡ ಪಾಟೀಲ ಸೇರಿದಂತೆ ನೇಸರಗಿ ಭಾಗದ ಎಲ್ಲ ಜನಾಂಗದ ನಾಯಕರು, ಪಂಚಾಯತ ಸದಸ್ಯರು, ಲಿಂಗಾಯತ ಪ್ರಮುಖರು, ಬಸವಾದಿ ಶರಣರು ಭಾಗವಹಿಸಿದ್ದರು.