ಬೆಳಗಾವಿ.ದಿನಾಂಕ : 25/08/2025 ರಂದು ಬೆಳಗಾವಿ ತಾಲ್ಲೂಕಿನ ಸರಕಾರಿ ಪ್ರೌಢಶಾಲೆ, ಕರಡಿಗುದ್ಧಿಯಲ್ಲಿ 2024-25 ರಲ್ಲಿ 9 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಟಾಪ್ 10 ವಿದ್ಯಾರ್ಥಿಗಳಿಗೆ ವೇನುಗ್ರಾಮ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವೇನುಗ್ರಾಮ ಫೌಂಡೇಶನ್ ವತಿಯಿಂದ ಡಾ. ಪ್ರಮೀಳಾ ಕೊಳ್ಳಿ, ಸಂಸ್ಥೆಯ ಆಡಳಿತಗಾರರಾದ ಜಗದೀಶ ಬೆಳ್ಗಾಂಕರ್ ಭಾಗವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ಜೇ. ಕೆ. ಪತ್ತಾರ ಅಧ್ಯಕ್ಷತೆ ವಹಿಸಿದ್ದರು.ಎಂ. ಬಿ. ಬಾಳಿಗಟ್ಟಿ ನಿರೂಪಣೆ ಮಾಡಿದರು. ಶ್ರೀಮತಿ. ಜಯಶ್ರೀ ಯೆಗಣಗೌಡರ ವಂದಿಸಿದರು.