ಮಹಿಳೆಯರು ಸಂಸ್ಥೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಅಧ್ಯಕ್ಷ ಡಾ‌. ಸಚಿನ ಸಬನೀಸ್‌

Ravi Talawar
 ಮಹಿಳೆಯರು ಸಂಸ್ಥೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಅಧ್ಯಕ್ಷ ಡಾ‌. ಸಚಿನ ಸಬನೀಸ್‌
WhatsApp Group Join Now
Telegram Group Join Now

ಬೆಳಗಾವಿ:  ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದುವ ಮೂಲಕ ದೇಶದ ಪ್ರಗತಿ ಕಾಣಲು ಸಾಧ್ಯ. ಮಹಿಳೆಯರು ಸಂಸ್ಥೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು  ಎಂದು   ಲಘು ಉದ್ಯೋಗ ಭಾರತಿ ಮಾಜಿ ಅಧ್ಯಕ್ಷ ಡಾ‌. ಸಚಿನ ಸಬನೀಸ್‌ ಅವರು ಹೇಳಿದರು.

ನಗರದ ತಿಲಕವಾಡಿಯ ಖಾಸಗಿ ಹೋಟೆಲ್‌ ನಲ್ಲಿ ಲಘು ಉದ್ಯೋಗ ಭಾರತಿ, ಮಹಿಳಾ ವಿಭಾಗದ  2025-27 ನೇ ಸಾಲಿನ ಬೆಳಗಾವಿ ಕರ್ನಾಟಕ ಪದಗ್ರಹಣ ಸಮಾರಂಭ ಉದ್ದೇಶಿಸಿ  ಅವರು ಮಾತನಾಡಿದರು.

ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು. ಎಲ್ಲಾ ‌ಕ್ಷೇತ್ರದಲ್ಲಿ ಮಹಿಳೆಯರು ಪ್ರಗತಿಯಾದ ದೇಶದ ಅಭಿವೃದ್ಧಿ ಸಾದ್ಯ  ಎಂದರು.

ಲಘು ಉದ್ಯೋಗ ಭಾರತಿ ಉಪಾಧ್ಯಕ್ಷರಾದ  ಡಾ. ಪ್ರಿಯಾ ಪುರಾಣಿಕ  ಅವರು ಮಾತನಾಡಿ, ಮಹಿಳಾ ಸಂಘಟನೆ ಗಟ್ಟಿಯಾಗಿ ನೆಲೆಯೂರಿದಾಗ ಮಾತ್ರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾದ್ಯ. ಮಹಿಳೆಯರು ಒಗ್ಗಟ್ಟಾಗಿ ಶ್ರಮಸಿದರೆ ಸಂಸ್ಥೆ ಮತ್ತಷ್ಟು ಏಳಿಗೆ ಕಾಣಲು ಸಾದ್ಯ.

ಲಘು ಉದ್ಯೋಗ ಭಾರತಿ ಬೆಳಗಾವಿ ವಿಭಾಗದ ಅಧ್ಯಕ್ಷರಾದ  ಮಹೇಶ ಇನಾಮದಾರ,  ಲಘು ಉದ್ಯೋಗ ಭಾರತಿ ಉಪಾಧ್ಯಕ್ಷರಾದ  ಡಾ. ಪ್ರಿಯಾ ಪುರಾಣಿಕ , ಲಘು ಉದ್ಯೋಗ ಭಾರತಿ ಕರ್ನಾಟಕದ ರಾಜ್ಯ ಮಾಜಿ ಅಧ್ಯಕ್ಷ ಸಚಿನ ಸಬನೀಸ್‌  ಅವರು ನೂತನವಾಗಿ ಆಯ್ಕೆಯಾದ ನಲಿನಿ ವೆಮೂಲಕರ್‌ ಮಹಿಳಾ ವಿಭಾಗದ ಅಧ್ಯಕ್ಷ ಮತ್ತು ಲತಾ ಹೂಲಿ ಅವರನ್ನು ಕಾರ್ಯದರ್ಶಿ ಅಧಿಕಾರ ಪದಗ್ರಹಣ ಕಾರ್ಯ ಮಾಡಿದರು.

ಈ  ವೇಳೆ ಲಘು ಉದ್ಯೋಗ ಭಾರತಿ ಬೆಳಗಾವಿ ವಿಭಾಗದ ಅಧ್ಯಕ್ಷರಾದ  ಮಹೇಶ ಇನಾಮದಾರ ಮಾತನಾಡಿದರು.ಈ ಸಂದರ್ಭದಲ್ಲಿ ಪ್ರೊ.  ಪೂರ್ಣಿಮಾ ಚರಂತಿಮಠ ಅವರು ಮುಖ್ಯ ಅತಿಥಿಗಳಾಗಿ  ಆಗಮಿಸಿದ್ದರು.   ಲತಾ ಹೂಲಿಕರ ಅವರು ಓದಿದರು. ಮೇಘಾ ಕುಲಕರ್ಣಿ ವಸುದಾ ಖಾಸಬಾಗ ಪ್ರಾರ್ಥನಾ ಗೀತೆ ಹಾಡಿದರು. ಭಾರತಿ ವಡವಿಯರ ನಿರೂಪಿಸಿದರು. ನಲಿನಿ ವೆಮೂಲಕರ್ ಸ್ವಾಗತಿಸಿ, ವಂದಿಸಿದರು.

WhatsApp Group Join Now
Telegram Group Join Now
Share This Article