ಕರಾಟೆ ಭವನಕ್ಕೆ ಅನುದಾನ ನೀಡಲು ಶಾಸಕ  ಭರತ್‌ರೆಡ್ಡಿ ಮೃತ್ಯುಂಜಯ ಸ್ವಾಮಿ  ಮನವಿ 

Ravi Talawar
ಕರಾಟೆ ಭವನಕ್ಕೆ ಅನುದಾನ ನೀಡಲು ಶಾಸಕ  ಭರತ್‌ರೆಡ್ಡಿ ಮೃತ್ಯುಂಜಯ ಸ್ವಾಮಿ  ಮನವಿ 
WhatsApp Group Join Now
Telegram Group Join Now
 ಬಳ್ಳಾರಿ :25  ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ನ ಪದಾಧಿಕಾರಿಗಳು ಬಳ್ಳಾರಿಯಲ್ಲಿ   ಆರ್ಟ್ಸ್ ಟ್ರಸ್ಟ್ವತಿಯಿಂದ ನಿರ್ಮಿಸುತ್ತಿರುವ ಕರಾಟೆ ಭವನಕ್ಕೆ ಅನುದಾನ ನೀಡಬೇಕೆಂದು ಪ್ರಶ್ನ ಸದಸ್ಯರು ಇತ್ತೀಚೆಗೆ ನಗರ ಶಾಸಕ ಭರತ್ ರೆಡ್ಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ಕಳೆದ 25 ವರ್ಷಗಳಿಂದ ಬಳ್ಳಾರಿ ನಗರದಲ್ಲಿ ವಿದ್ಯಾರ್ಥಿಗಳಿಗೆ  ಪ್ರತಿನಿತ್ಯ ಉಚಿತವಾಗಿ ಕರಾಟೆ, ಯೋಗ, ಧ್ಯಾನ ತರಬೇತಿಯನ್ನು ನೀಡುತ್ತಿದ್ದು ಇದರಿಂದ ಆತ್ಮ ರಕ್ಷಣೆಯ ವಿಶ್ವಾಸ ಹೆಚ್ಚಾಗಿರುತ್ತದೆ.  ಅವರಿಗೆ ಇನ್ನೂ ಹೆಚ್ಚಿನ ತರಬೇತಿಯನ್ನು ನೀಡಲು ಆಧುನಿಕ ಶೈಲಿಯ ಕರಾಟೆ ತರಬೇತಿಗೆ ವ್ಯವಸ್ಥೆಯನ್ನು ಮಾಡಲು ಮತ್ತು  ವಿಶೇಷ ತರಬೇತಿಯನ್ನು ನೀಡಲು ಕರಾಟೆ ಭವನ ನಿರ್ಮಾಣ ಮಾಡಲು   ಟ್ರಸ್ಟ್ ಮುಂದಾಗಿದ್ದು, ಅದಕ್ಕೆ ಶಾಸಕರ ಅನುದಾನದಲ್ಲಿ ಹಣವನ್ನು ನೀಡಬೇಕೆಂದು ಪ್ರಶ್ನ ಅಧ್ಯಕ್ಷ ಬಂದ್ರಾಳ್  ಮೃತ್ಯುಂಜಯ ಸ್ವಾಮಿ ಮನವಿ ಮಾಡಿಕೊಂಡರು.
 ಮನವಿಯನ್ನು ಸ್ವೀಕರಿಸಿದ ಶಾಸಕ  ನಾರಾ ಭರತ್‌ರೆಡ್ಡಿಯವರು ಸಕರಾತ್ಮಕವಾಗಿ ಸ್ಪಂದಿಸಿ ಈಗಾಗಲೇ ಜಿಲ್ಲೆಯ ಎಲ್ಲಾ ಕ್ರೀಡೆಗಳಿಗೆ ಸಹಾಯ, ಸಹಕಾರ ನೀಡುತ್ತಿದ್ದು, ತಮ್ಮ ಕರಾಟೆ ಭವನಕ್ಕೂ ಕೂಡಾ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಾನಾಳ್ ಶೇಖರ್, ಕರವೇ ಅಧ್ಯಕ್ಷರಾದ ಅಂಗಡಿ ಶಂಕ್ರಪ್ಪ,  ಗಂಗಾವತಿ ವಿರೇಶ್, ಶಬರಿ ರವಿಚಂದ್ರನ್, ಹುಬ್ಬಳ್ಳಿ ರಾಜಶೇಖರ್‌ಗೌಡ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article