ಮೊದಲ ಸಲ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಕಡ್ಡಾಯವಲ್ಲ: ಹಣಕಾಸು ಸಚಿವಾಲಯ

Ravi Talawar
ಮೊದಲ ಸಲ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಕಡ್ಡಾಯವಲ್ಲ: ಹಣಕಾಸು ಸಚಿವಾಲಯ
WhatsApp Group Join Now
Telegram Group Join Now

ನವದೆಹಲಿ, ಆಗಸ್ಟ್ 25: ಯಾವತ್ತೂ ಸಾಲ ಮಾಡದವರು ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡದವರಿಗೆ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಇರುವುದೇ ಇಲ್ಲ. ಇಂಥವರು ಸಾಲಕ್ಕೆ ಅರ್ಜಿ ಹಾಕಿದಾಗ ಬ್ಯಾಂಕುಗಳು ಇವರಿಗೆ ಉತ್ತಮ ಸಿಬಿಲ್ ಸ್ಕೋರ್ ಇಲ್ಲವೆಂದು ಸಾಲ ನೀಡಲು ನಿರಾಕರಿಸುವ ಸಾಧ್ಯತೆ ಇದೆ. ಹಣಕಾಸು ಸಚಿವಾಲಯವು ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದು, ಮೊದಲ ಬಾರಿ ಸಾಲ ಪಡೆಯುತ್ತಿರುವವರಿಗೆ ಅವರ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಕಡ್ಡಾಯವೇನಿಲ್ಲ ಎಂದು ಹೇಳಿದೆ.

ಮೊದಲ ಬಾರಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿರುವ ವ್ಯಕ್ತಿಗೆ ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲವೆಂಬ ಕಾರಣಕ್ಕೆ ಸಾಲ ತಿರಸ್ಕಾರ ಮಾಡಬಾರದು ಎಂದು 2025ರ ಜನವರಿ 6ರಂದು ಆರ್​ಬಿಐ ಸಲಹೆ ನೀಡಿರುವ ವಿಚಾರವನ್ನು ಸಚಿವ ಚೌಧರಿ ಉಲ್ಲೇಖಿಸಿದ್ದಾರೆ.

WhatsApp Group Join Now
Telegram Group Join Now
Share This Article