ಬೈಲಹೊಂಗಲ: ಪಟ್ಟಣದ ಪ್ರತಿಷ್ಠಿತ ಮೆಟಗುಡ್ಡ ಮನೆತನದ ಯುವ ನಾಯಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ, ಬಿಜೆಪಿ ಬೆಳಗಾವಿ ಜಿಲ್ಲೆಯ ಉಪಾಧ್ಯಕ್ಷ, ಕೃಷಿಕ ಸಮಾಜದ ತಾಲೂಕಾ ಅಧ್ಯಕ್ಷ, ಕ್ರೀಯಾಶೀಲ ಪುರಸಭೆ ಸದಸ್ಯ, ಬೈಲಹೊಂಗಲ ಅರ್ಬನ್ ಬ್ಯಾಂಕಿನ ನಿರ್ದೇಶಕ, ಶಕ್ತಿ ಪಿಕೆಪಿಎಸ್ ಅಧ್ಯಕ್ಷ, ಉತ್ಸಾಹಿ ಯುವ ನಾಯಕರಾದ ಗುರು ಮೆಟಗುಡ್ಡ ಅವರ 48ನೇ ಹುಟ್ಟು ಹಬ್ಬದ ಪ್ರಯುಕ್ತ ಬೈಲಹೊಂಗಲದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಐಎಎಸ್ ಐಪಿಎಸ್ ಡಾಕ್ಟರ್ಸ್ ಇಂಜಿನಿಯರ್ ಗೆ ಸಹಕಾರಿ ಆಗುವಂತಹ ಸುಮಾರು 1000 ಪುಸ್ತಕಗಳನ್ನು ಕೊಡುಗೆ ನೀಡಿ, ನಂತರ ಕಾರ್ಮೆಲ್ ಶಾಲೆಯ ಬುದ್ದಿಮಾಂದ್ಯ ಮಕ್ಕಳಿಗೆ ಹಾಸಿಗೆ ವಿತರಣೆ ಜೋತೆಗೆ ಸಂಸ್ಕೃತಿ ಫೌಂಡೇಶನ್ ಅವರ ನಿರಾಶ್ರಿತ ಆಶ್ರಮದ ನಿರಾಶ್ರಿತರಿಗೆ ಒಂದು ದಿನದ ಊಟದ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಈ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕು ನಮ್ಮ ವಿದ್ಯಾರ್ಥಿಗಳು ರಾಷ್ಟ್ರೀಯ & ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಆಗಬೇಕು ಎಂಬುದು ನನ್ನ ಆಶಯ, ಶಿಕ್ಷಣದಿಂದ ಯಾವ ಮಕ್ಕಳು ವಕಚಿತರಾಗಬಾರದು, ನನ್ನ ಚಿಕ್ಕಪ್ಪ ಜಗದೀಶ್ ಮೆಟಗುಡ್ಡ ಅವರ ಮಾರ್ಗದರ್ಶನದಲ್ಲಿ ಸಮಾಜ ಸೇವೆ ಮನಸ್ಸಿಗೆ ತೃಪ್ತಿ ತಂದಿದೆ, ಹಿರಿಯರ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ, ನಮ್ಮ ಕುಟುಂಬ ಜನಹಿತ ಕಾರ್ಯಗಳಿಗೆ ಸದಾ ಜನತೆಯ ಜೋತೆಗೆ ಇರುತ್ತದೆ ಎಂದರು.
ನಂತರ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ ಮಾತನಾಡಿ ಮೆಟಗುಡ್ಡ ಮನೆತನದ ಕೊಡುಗೆ ಅಪಾರ, ನಂಬಿ ಬಂದವರ ಆಶ್ರಯದಾತರಾಗಿದ್ದಾರೆ, ಗುರು ಮೆಟಗುಡ್ಡ ಅವರ ಸಮಾಜ ಮುಖಿ ಕಾರ್ಯಕ್ರಮ ಇತರರಿಗೆ ಪ್ರೇರಣೆ ಆಗಿದ್ದಾರೆ, ಪುಸ್ತಕ ವಿತರಣೆ, ಕ್ರೀಡಾ ಪರಿಕರ, ಬುದ್ದಿಮಾಂದ್ಯ ಮಕ್ಕಳಿಗೆ ಹಾಸಿಗೆ ವಿತರಣೆ, ಈ ರೀತಿಯಾಗಿ ಸೇವೆ ಮಾಡುತ್ತಾ ಜನ ಮನಸ್ಸಿನ ನೇತಾರರಾಗಿ ಗುರು ಮೆಟಗುಡ್ಡ ಹೊರಹೊಮ್ಮಿದ್ದಾರೆ, ರಾಜಕೀಯ ರಂಗದ ಜೋತೆಗೆ ಸಹಕಾರ ರಂಗದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ ಎಂದರು,
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುಭಾಸ ತುರಮರಿ, ಹಿರಿಯ ಮುಖಂಡ ಶಿವಾನಂದ ಬಡ್ಡಿಮನಿ, ದಯಾನಂದ ಪರಾಳಶೆಟ್ಟರ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ ವಾಲಿ, ಪ್ರಕಾಶ ಬಡ್ಲಿ,
ಕಾಲೇಜು ಪ್ರಾಚಾರ್ಯರು,ಉಪನ್ಯಾಸಕ ವೃಂದ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹುಟ್ಟು ಹಬ್ಬದ ಪ್ರಯುಕ್ತ ಗುರು ಮೆಟಗುಡ್ಡ ಗೆಳೆಯರ ಬಳಗ ಅವರ ಗೃಹ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಮಾಜಿ ಶಾಸಕರುಗಳಾದ ಜಗದೀಶ ಮೆಟಗುಡ್ಡ, ಮಾಹಾದೇವಪ್ಪ ಯಾದವಾಡ, ಬೆಳಗಾವಿ ಜಿತೋ ಅಧ್ಯಕ್ಷ ಹರ್ಷವರ್ಧನ ಇಂಚಲ, ಅನೇಕ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು, ವಿವಿಧ ಮಠಾಧೀಶರು, ಬಿಜೆಪಿ ರಾಷ್ಟ್ರೀಯ,ರಾಜ್ಯ, ಜಿಲ್ಲಾ ನಾಯಕರು, ಗೆಳೆಯರು, ಅಭಿಮಾನಿ ಬಳಗ ಪೋನ ಮೂಲಕ ಶುಭ ಹಾರೈಸಿದರು.