ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ

Ravi Talawar
ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ
WhatsApp Group Join Now
Telegram Group Join Now
ಅಂದು ಮುಂಜಾನೆ ಸಮಯ ಸರಿಯಾಗಿ, 7 ಗಂಟೆ ದಾಟಿ 8 ಗಂಟೆಯ ಸಮೀಪಿಸುತ್ತಿತ್ತು. ನನ್ನ ಪ್ರಯಾಣ ಅಥಣಿಯಿಂದ ಗೋಕಾಕದ ಕಡೆಗೆ ಬಸ್ಸಿನಲ್ಲಿ ಸಾಗುತ್ತಿತ್ತು.  ಸ್ವಲ್ಪ ಸಮಯದ ನಂತರ ನನ್ನ ಮನಸ್ಸು  ಯಾಕೋ ಭಾರವಾಗ ತೊಡಗಿತು ಅದಕ್ಕೂ ಕಾರಣವು ಒಂದಿತ್ತೂ.
‌  ಬಸ್ಸಿನ ಕಿಟಕಿಯ ಹತ್ತಿರದ ಸೀಟಿನಲ್ಲಿ ಕುಳಿತ ನನಗೆ ಪ್ರತಿ ಊರಿನ ಮುಖ್ಯ ರಸ್ತೆಯ ಸ್ವಲ್ಪವೇ ದೂರದ ಅಂಚಿನಲ್ಲಿ ಕಾಣಸಿಗುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಎಂಬ ನಾಮಫಲಕಗಳು ನನ್ನ ಗಮನವನ್ನು ಸೆಳೆದವು
‌  ಸರ್ಕಾರಿ ಶಾಲೆಗಳಲ್ಲಿ  ಓದಿಕೊಂಡು ಆಟ ಆಡುತ್ತ ಕಳೆದಂತಹ ಆ  ದಿನಗಳನ್ನು ಮೆಲುಕು ಹಾಕುವಂತೆ ಮಾಡುವ ನಮ್ಮ-ನಿಮ್ಮ ಸರ್ಕಾರಿ ಶಾಲೆಗಳು ಅದೇಷ್ಟು ಚಂದ.
‌       ಅದಲ್ಲದೇ ಪ್ರತಿ ಮಗುವಿನ ಮೂಲ ದಾಖಲಾತಿ ಇತಿಹಾಸವನ್ನು ತನ್ನ ಮಡಿಲಲ್ಲಿ ಪ್ರತಿ ಸರ್ಕಾರಿ ಶಿಕ್ಷಕನ ಕೈ ಬರಹದ ಮೂಲಕ ರಿಜಿಸ್ಟರ್ ಪುಸ್ತಕ ಎಂಬ ನಾಮಾಂಕಿತದಿಂದ ಶಾಲೆಯ ಮುಖ್ಯ ಗುರುಗಳ ಮುಖ್ಯೋಪಾಧ್ಯಾಯರ ಕಾರ್ಯಾಲಯದಲ್ಲಿ  ಜಗತ್ತಿನ ಯಾವ ಲಾಕರ್ ಗಳಿಗೂ ಕಡಿಮೆ ಇಲ್ಲದಂತೆ  ಆ ಊರಿನ ಗಣ್ಯರಿಂದಲೂ ಅಥವಾ ತನ್ನದೇ ಮಡಿಲಲ್ಲಿ ಕಲಿತ ಮಕ್ಕಳಿಂದಲೋ ಕೊಡುಗೆಯಾಗಿ ದೊರೆತ ಭದ್ರವಾದ ಕಪಾಟುಗಳಲ್ಲಿ ಮೌನವಾಗಿ ಕುಳಿತಿರುತ್ತದೆ. ಬಿಚ್ಚಿ  ನೋಡಿದರೆ ಬಿಳಿ ಹಾಳೆಗಳ ಮೇಲೆ ನಮ್ಮ ಶಿಕ್ಷಕರ ಅಕ್ಷರದ ಕೈಚಳಕ ಹಾಗೆ ಇರುತ್ತದೆ  ಹಾಳೆಗಳು ಹಳೆಯದಾಗಿರುತ್ತದೇ ಅದನ್ನು ನೋಡಿದಾಗ ಬಾಲ್ಯ ನೆನಪಿನಂಗಳದಲ್ಲಿ ಮರುಕಳಿಸಿ ಅದೇಷ್ಟೋ ಹೆಸರು  ಇನ್ನಷ್ಟೂ ಸಿಹಿ-ಕಹಿ ನೆನಪುಗಳ ಚಕ್ರವನ್ನು ಪರಿಚಯಿಸುತ್ತದೆ ಇದೆಲ್ಲವೂ ಒಂದು ವಿಶಿಷ್ಟ ಅದ್ಬುತ ಅದು ಅನುಭವಿಸಿದವರಿಗೆ ಮಾತ್ರ ಗೊತ್ತು.
ಇಲ್ಲಿ  ಒಂದಂತೂ ನಿಜ ಮೌನದ ನಂದನ ವನದಲ್ಲಿ ಮುಕ್ತವಾಗಿ ನಲಿದ ನಾವುಗಳು ಮಾತ್ರ ಈ ಜಗತ್ತಿನ ನೆನಪಿನಿಂದ ದೂರ ಹೆಜ್ಜೆಗಳನ್ನು ಹಾಕಿ ಅದೇಷ್ಟೋ ದೂರ ನಡೆದಂತೂ ನಿಜ ಆದರೆ ತನ್ನದೇ ಮಡಿಲಲ್ಲಿ ತಾಯಿಗುಣವನ್ನು  ಸಾರುವ ಈ ಜ್ಞಾನದೇಗುಲ ನಮ್ಮಂತಹ  ಸಾವಿರ ಸಾಸಿರ ಮುದ್ದು ಜೀವಗಳಿಗೆ ಮಣೇ  ಹಾಕಿದ್ದಂತೂ ಸತ್ಯ  ಅದಷ್ಟೇ ಅಲ್ಲದೆ ಇಂದು ತನ್ನ ಕಾರ್ಯದಲ್ಲಿ ತಾನು ತಲ್ಲಿನವಾಗಿದೆ. ತನ್ನೋಡಲ  ಮಂಡಲದಲ್ಲಿ   ಎಂತಹ ದೊಡ್ಡ ಸಾಧಕನ ಸಾಧನೆಯ ಮೆಟ್ಟಿಲ ಕುರುಹುಗಳನ್ನು ದಾಖಲಿಸಿರುತ್ತದೆ.
     ಅದೇಷ್ಟೋ ಅಳಿದು ಹೋದ ಶಿಕ್ಷಕರ ಅಳಿಸಲಾಗದ ಅಕ್ಷರಗಳ ಬುತ್ತಿ ಬಿಚ್ಚಿ ನೋಡಿದರೆ ಅಪರೂಪದ ಅಕ್ಷರಗಳ  ಸಾವಿರ ಸತ್ಯದ ಕನ್ನಡಿಗಳು  ಸಾಕಷ್ಟು ಸಿಹಿ ಕಹಿಗಳ ಸಂಭ್ರಮ ಎನ್ನುವಷ್ಟರಲ್ಲಿ ಯಾವುದೇ ಕಾರಣಕ್ಕೂ ಸ್ನೇಹಿತನದ್ದೊ ಸ್ನೇಹಿತೇಯದ್ದೊ ಒಂದು ಬದುಕಿನ ಕೊನೆಯ ಅಂಚಿನ  ರೂಪದ ಸಾವು  ಸಂಭವಿಸಿದ್ದು, ಇಂದಿಗೂ ಮಾಸದ [ಮರೆಯಲಾಗದ] ಕಾಲಚಕ್ರದ ತಾಳ.  ಆದರೆ ಕಾಲಗತಿಸಿದ ಹಾಗೆ ನಾವು ಇಂದು ಕೊಂಚ ದೂರ ಸಾಗಿ ಬಂದಿದ್ದೇವೆ ಅದಂತೂ ನಿಜ ಆದರೆ ಯಾವುದನ್ನೂ ಇಲ್ಲಿ ನಾವು ಮರೆತಿಲ್ಲ. ತನ್ನ ಮಡಿಲಲ್ಲಿ ನಮ್ಮ  ಪ್ರತಿ ಹೆಜ್ಜೆಗಳ ಕುರುಹುಗಳನ್ನು  ಇತಿಹಾಸದ ಪುಟಗಳಲ್ಲಿ ಅದೊಂದು ದಾಖಲೆಗಳಿಗೆ ಪಾತ್ರವಾಗಿರುವ ಶಾಲೆಯು  ತನ್ನದೇಯಾದ ಏಕಾಂತದಲ್ಲಿ ವಿಶ್ರಾಂತಿ ಇಲ್ಲದೆ ತಾಯಿತನದ ಭಾವ ತೋರುವಲ್ಲಿ  ನಿನ್ನ ಕಾರ್ಯ ಅಮೋಘವಾದದ್ದು ಎಂತಹ ಧನ್ಯತಾ ಭಾವ ನಿನ್ನದು ಎಂಬ ಮನದ ಮಾತಿನೊಂದಿಗೆ ಮತ್ತೆ ಭೇಟಿಯಾಗೋಣ ಮುಂದಿನ ಮಾತಿನ ತವಕದಲ್ಲಿ ಒಂದಿಷ್ಟೂ ನೆನಪಿನಂಗಳದ ಬುತ್ತಿಯ  ಅಕ್ಕರೆಯ ನುಡಿಗಳ,ಮಮತೆಯ ಶಾಲೆಯ  ಆವರಣದಲ್ಲಿ ಅಡಗಿ ಕುಳಿತಿರುವ  ಅದೇಷ್ಟೋ ಧ್ವನಿಗಳ ಆರ್ತನಾದದೊಂದಿಗೆ ನಾನು ಮತ್ತು ನೀವು..  [ಸರಕಾರಿ ಶಾಲೆಯ ಸಿಹಿ-ಕಹಿ ನೆನಪಿನ ಸಾಂಗತ್ಯ ಭಾಗ -1]
ಮುಂದುವರೆಯುವುದು
ಸಂಗಮೇಶ ಹತ್ತರಕಿಹಾಳ
ಶಿಕ್ಷಕರು ಹಾಗೂ ಲೇಖಕರು
ಪೋ-9741847306
ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕೊಟ್ಟಲಗಿ
WhatsApp Group Join Now
Telegram Group Join Now
Share This Article