ಮಹಾಲಿಂಗಪುರ : ಈ ಜಗತ್ತಿನಲ್ಲಿ ಗುರುವಿಗೆ ಇರುವ ಶಕ್ತಿ ಅಪಾರವಾದುದು ಅದನ್ನು ಅಳೆಯಲು ಸಾಧ್ಯವಿಲ್ಲ. ಗು ಎಂದರೆ ಅಂಧಕಾರ ಅಥವಾ ಅಜ್ಞಾನ ರು ಎಂದರೆ ದೂರ ಮಾಡುವವ ಎಂದರ್ಥ ಅಂಧಕಾರದ ಕತ್ತಲೆಯನ್ನು ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ನೀಡುವವ ಗುರು ಎಂದು ಕು?ಗಿ ತಾಲೂಕಿನ ದೊಟಿಹಾಳದ ಪೂಜ್ಯ ಶ್ರೀ ಚಂದ್ರಶೇಖರ ದೇವರು ಹೇಳಿದರು.
ಅವರು ನಗರದ ಟೊಣಪಿನಾಥ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಘಟಕ ಮಹಾಲಿಂಗಪುರ್ ಇದರ ಸಹಯೋಗದಲ್ಲಿ ಶ್ರಾವಣ ಮಾಸದ ನಿಮಿತ್ಯ ಅಧ್ಯಾತ್ಮ ಪ್ರವಚನದ ಕೊನೆಯ ದಿನ ಆಶೀರ್ವಚನ ನೀಡಿ ಮಾತನಾಡಿ “ನೋಟದ ಭಕ್ತಿ” ಮತ್ತು “ಕೂಟದ ಜ್ಞಾನ” ಎಂಬುದು ಲಿಂಗಾಯತ ಧರ್ಮದ ಎರಡು ಪ್ರಮುಖ ಆಯಾಮಗಳನ್ನು ಪ್ರತಿನಿಧಿಸುತ್ತದೆ. ’ನೋಟದ ಭಕ್ತಿ’ ಎಂದರೆ ಇ?ಲಿಂಗದ ಮೂಲಕ ದೇವರನ್ನು ನೇರವಾಗಿ ಅನುಭವಿಸುವ, ನೋಡುವ ಭಕ್ತಿ. ಇದು ಯಾವುದೇ ಮಧ್ಯವರ್ತಿಗಳಿಲ್ಲದೆ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅಂಗೈಯಲ್ಲಿ ಲಿಂಗವನ್ನು ಧರಿಸಿ, ನೇರವಾಗಿ ದೈವದೊಂದಿಗೆ ಅನುಸಂಧಾನ ನಡೆಸುವ ಕ್ರಾಂತಿಕಾರಕ ಪರಿಕಲ್ಪನೆಯಾಗಿದೆ. ಅಂತೆಯೇ, ’ಕೂಟದ ಜ್ಞಾನ’ ಎಂದರೆ ಅನುಭವ ಮಂಟಪದಂತಹ ವೇದಿಕೆಯಲ್ಲಿ ನಡೆಯುವ ಸಮಾನತೆಯ ಚರ್ಚೆ ಮತ್ತು ಜ್ಞಾನದ ಹಂಚಿಕೆ. ಈ ಎರಡೂ ಪರಿಕಲ್ಪನೆಗಳು ಬಸವಣ್ಣನವರಿಂದಲೇ ಹುಟ್ಟಿಕೊಂಡವು ಎಂದರು.
ಈ ಸಂಧರ್ಭದಲ್ಲಿ ಚಿಮ್ಮಡದ ಪ ಪೂ ಶ್ರೀ ಪ್ರಭು ಮಹಾಸ್ವಾಮಿಗಳು, ಜನಾರ್ದನ ಮಹಾರಾಜರು (ಯರಗಟ್ಟಿಕರ) ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಳೆದ ಐದು ದಿನಗಳಿಂದ ನಡೆಯುತ್ತಿರುವ ಪ್ರವಚನ ಇವರಿಗೆ ತಬಲಾ ವಾದ್ಯ ಸೇವೆಯನ್ನು ವೀರೇಶ್ವರ ಪುಣ್ಯಾಶ್ರಮ ಗದಗದ ಮುದುಕೇಶಕುಮಾರ ಲಿಂಗನಬಂಡಿ ಮತ್ತು ಸಂಗೀತ ಸೇವೆಯನ್ನು ಶರಣುಕುಮಾರ ಲಿಂಗನಬಂಡಿ ಒದಗಿಸಿದರು.ಈ ಸಂಧರ್ಭದಲ್ಲಿ ಗಣ್ಯ ಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇಂದಿನ ಕಾರ್ಯಕ್ರಮದಲ್ಲಿ ಮುತೈದೆಯರಿಗೆ ಉಡಿ ತುಂಬುವ ಕಾರ್ಯ ಜರುಗಿತು. ಈ ಉಡಿ ತುಂಬುವ ಮತ್ತು ಮಹಾ ಪ್ರಸಾದ ವ್ಯವಸ್ಥೆಯನ್ನು ಯುವ ಮುಖಂಡರಾದ ಚನ್ನಬಸು ಹೊಸೂರು ಮಾಡಿಸಿದರು.ಮುಖಂಡರಾದ ಚಂದ್ರು ಗೊಂದಿ, ಬಸವರಾಜ್ ಕುಳ್ಳೊಳ್ಳಿ, ಶ್ರೀಶೈಲ ಉಳ್ಳಾಗಡ್ಡಿ ವಿ ಎಸ್ ಅಂಗಡಿ, ಬಸು ಕೊಪ್ಪದ ಚನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗ ಅವರಾಧಿ, ರಮೇಶ ಹರಕಂಗಿ, ಬಸವರಾಜ್ ಘಟ್ನಟ್ಟಿ, ಶಂಕರ ಪಟ್ಟಣಶೆಟ್ಟಿ ಮಾಜಿ ಸೈನಿಕರು ಸೇರಿ ಹಲವರು ಇದ್ದರು,ಬಸವರಾಜ ಮೇಟಿ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ಪ್ರೀತಿ ಕಲ್ಯಾಣಿ ನಿರೂಪಿಸಿ ವಂದಿಸಿದರು.