ರೈತರಿಗೆ ೫ ಸಾವಿರ ರೂ. ಪತ್ತು ಹೆಚ್ಚಳ : ಆರ್ ಎಮ್ ಯತ್ತಿನಮನಿ

Pratibha Boi
ರೈತರಿಗೆ ೫ ಸಾವಿರ ರೂ. ಪತ್ತು ಹೆಚ್ಚಳ : ಆರ್ ಎಮ್ ಯತ್ತಿನಮನಿ
WhatsApp Group Join Now
Telegram Group Join Now

ನೇಸರಗಿ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ಮುಂದಿನ ಸಾಲ ವಿತರಣೆಯಲ್ಲಿ ಸೋಯಾಬಿನ್ ಬೆಳೆಗೆ ಪತ್ತು ಹೆಚ್ಚಳ ಆಗಿ ರೈತರು ಎಕರೆಗೆ ೫ ಸಾವಿರ ರೂಪಾಯಿಗಳನ್ನು ಹೆಚ್ಚಿಗೆ ಪಡೆಯುತ್ತಿರಿ ಎಂದು ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ನೇಸರಗಿ ಇದರ ಅಧ್ಯಕ್ಷರಾದ ರಾಜಶೇಖರ ಯತ್ತಿನಮನಿ ಹೇಳಿದರು.
ಅವರು ಗುರುವಾರದಂದು ಇಲ್ಲಿನ ಸಹಕಾರಿ ಸಂಘದ ಮುಂದೆ ಇರುವ ಶ್ರೀ ದೇಮ್ಮವನ ಕಟ್ಟೆ ಆವರಣದಲ್ಲಿ ಆಯೋಜಿಸಲಾಗಿದ್ದ ಪಿ ಕೆ ಪಿ ಎಸ್ ನ ೧೧೮ ನೇ ಸರ್ವ ಸದಸ್ಯರ ಸಾಧಾರಣ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಹಕಾರಿ ಸಂಘಗಳ ನಿಯಮಗಳ ಹಾದಿಯಲ್ಲಿ ರೈತರಿಗೆ ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ೧೦೦ ವರ್ಷದ ಉನ್ನತ ಮಟ್ಟದ ಕಾರ್ಯಕ್ರಮವನ್ನು ಸದಸ್ಯರು, ಹಿರಿಯರೊಂದಿಗೆ ಚರ್ಚಿಸಿ ಆಚರಣೆಗೆ ಕ್ರಮ ಕೈಗೊಳ್ಳಲಾಗುವದು ಎಂದರು.
ಸಂಘದ ಕಾರ್ಯನಿರ್ವಾಹಕ ವಿಶ್ವನಾಥ ಕೂಲಿನವರ ವರದಿ ವಾಚನ ಮಾಡಿ ಸಂಘವು ೧೨೫೮ ಶೇರು ಸದಸ್ಯರನ್ನು ಹೊಂದಿದ್ದು ೪೫,೯೬,೨೪೫ ರೂ. ಗಳ ಶೇರು ಬಂಡವಾಳ ಹೊಂದಿ ಪ್ರಸಕ್ತ ವರ್ಷ ೨,೫೪,೨೬೭. ೨೮ ರೂ.ಗಳ ಲಾಭ ಗಳಿಸಿದೆ ಮತ್ತು ಬೀಜ ಮತ್ತು ಯೂರಿಯಾ ಗೊಬ್ಬರ ವ್ಯವಸ್ಥೆ ಸುಗಮವಾಗಿ ರೈತರಿಗೆ ಒದಗಿಸಲಾಗುತಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಸಹಕಾರಿಯ ಬೆಳವಣಿಗೆಗೆ ಹಾಗೂ ರೈತರ ಅನೇಕ ಸವಲತ್ತುಗಳಿಗೆ ಅನೇಕ ಸದಸ್ಯರು ಸಲಹೆ, ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ರತ್ನಾ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ವೀರಪ್ಪಣ್ಣ ಚೋಭಾರಿ, ಮಲ್ಲೇಶಪ್ಪ ಮಾಳಣ್ಣವರ, ಎಸ್ ಎಮ್ ಪಾಟೀಲ, ಮಹಾಂತೇಶ ಸತ್ತಿಗೇರಿ, ಗಂಗಪ್ಪ ಕಾಡಣ್ಣವರ, ಶ್ರೀಮತಿ ಅನ್ನಪೂರ್ಣ ರೊಟ್ಟಿ, ಸಿದ್ದಪ್ಪ ತುಳಜನ್ನವರ, ಫಕ್ಕಿರಪ್ಪಾ ಸೋಮಣ್ಣವರ, ಫಕ್ಕಿರಪ್ಪ ತೋಟಗಿ, ಯಲ್ಲಪ್ಪ ತಳವಾರ, ಸಾವಿತ್ರಿ ಕೋಲಕಾರ, ಸುರೇಶ ಖಂಡ್ರಿ, ಮಕಬುಲ್ ಬೇಪಾರಿ, ಮತ್ತು ಗ್ರಾಮದ ಮುಖಂಡರಾದ ಅಡಿವಪ್ಪ ಮಾಳಣ್ಣವರ, ಸೋಮಪ್ಪ ಸೋಮಣ್ಣವರ, ಶಂಕರ ತಿಗಡಿ,ಸಿದ್ದಪ್ಪ ಇಂಚಲ, ಎಮ್ ಟಿ ಪಾಟೀಲ, ಮಹಾಂತೇಶ ಕೂಲಿನವರ,ದೇಮಣ್ಣ ಗುಜನಟ್ಟಿ, ಶಿವನಪ್ಪ ಮದೇನ್ನವರ, ಸುಜಾತ ಪಾಟೀಲ,ಅಡಿವಪ್ಪ ಚಿಗರಿ, ಶೇಖರ ಕಾರಜೋಳ, ಮಲ್ಲಪ್ಪ ಗುಜನಟ್ಟಿ,ಬಸವರಾಜ ಚಿಕ್ಕನಗೌಡ್ರ, ಸಹಕಾರಿಯ ಸದಸ್ಯರು, ನೇಸರಗಿ, ಸೋಮನಟ್ಟಿ ಗ್ರಾಮದ ರೈತರು, ಗ್ರಾಮದ ಮುಖಂಡರು, ಗ್ರಾಮಸ್ಥರು,ಸಂಘದ ಸಿಬ್ಬಂದಿ ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article