ಬೆಳಗಾವಿ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಭಾರಿ ಮತ್ತು ಲಘು ವಾಹನಗಳಿಗೆ ಪ್ರತೇಕ ದರದಲ್ಲಿ ಟೋಲ್ ವಾರ್ಷಿಕ ಪಾಸ ಕಡಿಮೆ ದರದಲ್ಲಿ ಜಾರಿಗೆ ಕೇಂದ್ರ ಸರ್ಕಾರ ತಂದಿದ್ದು, ಈ ಯೋಜನೆಯಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಕಾರುಗಳಿಗೆ ವಾರ್ಷಿಕ ರೂ. ೩೦೦೦/- ದರದಲ್ಲಿ ೨೦೦ ಟೋಲಗಳನ್ನು ಸಾಗಬಹುದಾಗಿದೆ. ಈ ನೂತನ ವಾರ್ಷಿಕ ಟೋಲ್ ಪಾಸ್ ಅನುಷ್ಠಾನದಿಂದ ಸಾರ್ವಜನಿಕರಿಗೆ ಹೆಚ್ಚಿನ ಮಟ್ಟದಲ್ಲಿ ಪ್ರಯೋಜನ ಆಗತ್ತದೆ. ಈ ಯೋಜನೆಯ ಅನುಷ್ಠಾನಕ್ಕೆ ಕಾರಣರಾದ ಪ್ರಧಾನಿ ಮೋಧೀಜಿ ಹಾಗೂ ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರ ಕಾರ್ಯ ಶ್ಲಾಘನೀಯ ಎಂದು ಬೆಳಗಾವಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಮಹಾಂತೇಶ ವಕ್ಕುಂದ ಹೇಳಿದ್ದಾರೆ..