ಯರಗಟ್ಟಿ: ಅಕ್ಟೋಬರ್ ೧೯ ರಂದು ನಡೆಯಲಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಯರಗಟ್ಟಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸೌಹಾರ್ದ ಸಭೆ ಗುರುವಾರ ಪಟ್ಟಣದಲ್ಲಿ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆಯಿತು.
‘ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇದ್ದರೂ, ಮೊದಲ ಹಂತದ ಪ್ರಚಾರ ಈಗಾಗಲೇ ಆರಂಭವಾಗಿದೆ. ಬಿಡಿಸಿಸಿ ಬ್ಯಾಂಕ್ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿದ್ದು, ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಯರಗಟ್ಟಿ ಅಭ್ಯರ್ಥಿ ಅಜೀತಕುಮಾರ ದೇಸಾಯಿ, ಸವದತ್ತಿ ಅಭ್ಯರ್ಥಿ ವೀರೂಪಾಕ್ಷ ಮಾಮನಿ ಹಾಗೂ ನಮ್ಮ ಎಲ್ಲಾ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ನಮ್ಮ ಗುಂಪು ಮತ್ತೊಂದು ಅವಧಿಗೆ ಅಧಿಕಾರಕ್ಕೆ ಮರಳುತ್ತದೆ ಎಂಬ ವಿಶ್ವಾಸ ನಮಗಿದೆ’ ಎಂದು ರಮೇಶ ಜಾರಕಿಹೊಳಿ ಸಭೆಯಲ್ಲಿ ಹೇಳಿದರು.
ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬಿಡಿಸಿಸಿ ಬ್ಯಾಂಕ್‌ನ್ನು ಬಲಿ?ವಾಗಿ ಕಟ್ಟಲು ಸಮಿತಿಯ ಎಲ್ಲ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆಮಾಡಬೇಕು. ಎಂಬ ಮಾತು ಕಥೆಗಳು ಆಗಿದ್ದವು ಆದರೆ ಹೊಸಬರ ಪಟ್ಟಿ ಹೆಚ್ಚುತ್ತಿರುವ ಕಾರಣ ಚುಣಾವಣೆ ಮಾಡಬೇಕಾಗಿದೆ.
ಈ ವೇಳೆ ಮಾಜಿ ಯಲ್ಲಮ್ಮನ ದೇವಸ್ಥಾನ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಜಗದೀಶ ಕೌಜಗೇರಿ, ವೆಂಕಟೇಶ ದೇವರಡ್ಡಿ, ರಾಜೇಂದ್ರಗೌಡ ಪಾಟೀಲ, ಮೋಹನ ಹಾದಿಮನಿ, ಗೌಡಪ್ಪ ಸವದತ್ತಿ, ಮಹಾದೇವ ಯಂಡ್ರಾವಿ, ಪಿಕೆಪಿಎಸ್ ಅಧ್ಯಕ್ಷರಾದ ಮಹಾಂತೇಶ ಗೋಡಿ, ವಿಠ್ಠಲ ಬಂಟನೂರ, ಬಿ. ಕೆ. ಪಾಟೀಲ, ಮಾಜಿ ತಾ. ಪಂ. ಅಧ್ಯಕ್ಷರಾದ ವಿನಕುಮಾರ ದೇಸಾಯಿ, ಪರ್ವತಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ ನಿರ್ದೆಶಕರಾದ ರತ್ನಾ ಮಾಮನಿ, ಮಾಜಿ ಬಿಜೆಪಿ ಮಂಡಳ ಅಧ್ಯಕ್ಷ ಈರಣ್ಣಾ ಚಂದರಗಿ, ಮಾಜಿ ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ಪುಂಡಲಿಕ ಮೇಟಿ, ಬೀರಪ್ಪ ಕುರಿ, ಕೃ?ಮೂರ್ತಿ ತೊರಗಲ್, ಆನಂದ ಬಾಗೋಡಿ, ಸದಾನಂದ ಪಾಟೀಲ, ಕುಮಾರ ಜಕಾತಿ ಮಹಾದೇವ ಮುರಗೋಡ, ಕಾಡಪ್ಪ ವೀರಶೆಟ್ಟಿ ಸೇರಿದಂತೆ ೨೩ ಪಿಕೆಪಿಎಸ್ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಇದ್ದರು.