ಹುನಗುಂದ; ಶ್ರಾವಣ ಮಾಸದ ಕೊನೆಯ ಸೋಮವಾರದಂದು ನಗರದ ಶ್ರೀ ಸಂಗಮೇಶ್ವರ ರಥೋತ್ಸವ ನಾಡಿನ ಶರಣ, ಸಂತರ ಮಠಾಧೀಶರ ಹಾಗೂ ಸಹಸ್ರಾರುನಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಮದ್ಯಾಹ್ನ ನಗರದ ಲಿಂಗದಕಟ್ಟಿಯಿಂದ ಪ್ರಮುಖ ಬೀದಿಯಲ್ಲಿ ಕಳಸದ ಮೆರವಣಿಗೆ ಸಂಚರಿಸಿ ಸಾಯಂಕಾಲ ೬ಗಂಟೆಗೆ ಸಂಗಮೇಶ್ವರ ದೇವಸ್ಥಾನ ತಲುಪಿತು. ಮಾರ್ಗದುದ್ದಕ್ಕೂ ಕಳಸಕ್ಕೆ ಭಕ್ತಾಧಿಗಳು ವಿಶೇಷ ಸಲ್ಲಿಸಿದರು. ರಥೋತ್ಸವ ಆರಂಭವಾಗುತ್ತಿದ್ದಂತೆ ನೆರೆದ ಅಪಾ ಸಂಖ್ಯೆಯ ಭಕ್ತಾಧಿಗಳು ಜೈ ಘೋಷ ಹಾಕುತ್ತ ರಥಕ್ಕೆ ಉತ್ತತ್ತಿ ಮತ್ತು ಬಾಳೆ ಹಣ್ಣು ತುರುತ್ತ ಭಕ್ತಿಯನ್ನು ಸಮರ್ಪಿಸಿದರು. ರಥೋತ್ಸವದ ಮುಂದೆ ಕರಡಿ ಮಜಲಿನ ತಂಡಳಿಂದ ವಿಶೇಷ ನಾದ ಭಕ್ತರಿಗೆ ಮುದ ನೀಡಿತು.