ಅಥಣಿ: ಅರ್ ಎಸ್ ಪಿ ಸಮೂಹ ಸಂಸ್ಥೆ ಗಳ ಮೂಲಕ ಎರಡು ವರ್ಷಗಳ ಕಾಲ ನಿರಂತರವಾಗಿ ಬಡತನದಿಂದ ಬಳಲುತ್ತಿರುವ ಹಾಗೂ ಆಶ್ರಯ ಇಲ್ಲದ ಬಡ ನಿರ್ಗತಿಕರು ಮತ್ತು ಬಿಚ್ಚಾಟನೆ ಮಾಡುವ ಪ್ರತಿದಿನ ನೂರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಅನ್ನದಾಸೋಹ ಮಾಡುವ ಕಾಯಕವನ್ನ ನಡೆಸುತ್ತಿರುವುದು ನಿಮ್ಮೆಲ್ಲರ ಸಹಕಾರದಿಂದ ಸಾದ್ಯವಾಗಿದೆ ಎಂದು ಆರ್ ಎಸ್ ಪಿ ಅಧ್ಯಕ್ಷ ರವಿ ಪೂಜಾರಿ ಹೇಳಿದರು
ಅಥಣಿ ಪಟ್ಟಣದ ಆರ್ ಎಸ್ ಪಿ ಸಮೂಹ ಸಂಸ್ಥೆಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ರವಿ ಪೂಜಾರಿ ಅವರು ನನ್ನ ಜೀವನದಲ್ಲಿ ಅತ್ಯಂತ ಬಡತನದ ಜೀವನವನ್ನು ಕಂಡಿದ್ದೇನೆ. ಒಂದು ಹೊತ್ತಿನ ಅನ್ನದ ಬೆಲೆ ಏನು ಅನ್ನುವುದು ನನಗೆ ಗೊತ್ತು. ದೇವರು ನನಗೆ ಈಗ ಹಲವು ಜನರಿಗೆ ಅಣ್ಣ ನೀಡುವ ಸೌಭಾಗ್ಯವನ್ನು ಕಲ್ಪಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಡ ಜನರಿಗಾಗಿ ಎರಡು ಹೊತ್ತಿನ ಊಟದ ವ್ಯವಸ್ಥೆಯನ್ನು ಹಾಗೂ ಅಂಬುಲೆನ್ಸ್ ಉಚಿತ ಸೇವೆಯನ್ನು ಒದಗಿಸುತ್ತಿರುವುದು ನನಗೆ ಅತ್ಯಂತ ಸಂತೋಷದ ಸಂಗತಿ ಆಗಿದೆ. ಎರಡನೆಯ ವರ್ಷದ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಕಾಯಕದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಂದಿನ ದಿನಮಾನಗಳಲ್ಲಿ ೫೦೦ ರಿಂದ ೧೦೦೦ ಜನರಿಗೆ ಉದ್ಯೋಗ ಕಲ್ಪಿಸುವ ಮಹತ್ವಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿತು ಅದನ್ನು ಸಹಕಾರ ಗೊಳಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ತಮ್ಮೆಲ್ಲರ ಸಹಕಾರದಿಂದ ಸಾಮಾಜಿಕ ಸೇವೆ ಮಾಡುತ್ತಿರುವುದು ನನ್ನ ಆತ್ಮ ತೃಪ್ತಿಗೆ ಎಂದು ಹೇಳಿದರು
ಈ ವೇಳೆ ಪ್ರಕಾಶ ಹಿಡಕಲ್, ಆನಂದ ಹಡಿಗಿನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.