ಸಿಂದಗಿ: ಮುಸ್ಲಿಮರ ಮತಗಳನ್ನು ತೆಗೆದುಕೊಂಡು ಗೆದ್ದಂತ ಕಾಂಗ್ರೆಸ್ ಪಕ್ಷದ ಶಾಸಕರ ಬಲಗೈ ಬಂಟ ಹಾಗೂ ಶಾಸಕರ ಸ್ವಜಾತಿ ವ್ಯಕ್ತಿ ಮುಸ್ಲಿಮರ ಮೇಲೆ ದೌರ್ಜನ್ಯ ಮಾಡುವುದನ್ನು ನೋಡಿದರೇ ಇದೇನು ಪ್ರಜಾ ರಾಜ್ಯನೋ! ಏನು ರೌಡಿ ರಾಜ್ಯನೋ ಅನ್ನೋದು ತಿಳಿತಾ ಇಲ್ಲ. ಇದೊಂದೆ ಘಟನೆಯಲ್ಲ. ಇಂತಹ ಅನೇಕೆ ಘಟನೆಗಳು ಈ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ನಡಿತಾನೇ ಇವೆ. ಮುಸ್ಲಿಮರು ಭಯದ ವಾತಾವರಣದಲ್ಲಿ ಬದುಕಬೇಕು ಅನ್ನೋ ಕಾರಣ ಇಟ್ಟಕೊಂಡು ಈ ರೀತಿ ನಡೆದಿರಬಹುದು ಅಂತ ಅನಿಸುತ್ತಿದೆ ಎಂದು ಎಐಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ದಸ್ತಗೀರ ಮುಲ್ಲಾ ವಿಷಾದಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಆಲಮೇಲ ಪಟ್ಟಣದಲ್ಲಿ ವಿಜಯಪುರ ಶಾಸಕ ಬಿ.ಆರ್.ಪಾಟೀಲ(ಯತ್ನಾಳ) ಹೇಳಿಕೆಯನ್ನು ಖಂಡಿಸಿ ಮಹಿಳೆಯರು, ಯುವಕರು ಕಪ್ಪು ಬಟ್ಟೆ ಪ್ರದರ್ಶನಕ್ಕೆ ಮುಂದಾದಾಗ, ಆಲಮೇಲ ಪಟ್ಟಣ ಪಂಚಾಯಿತಿ ಸದಸ್ಯ, ಪಂಚ ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ಅಶೋಕ ಕೊಳಾರಿ ಪೊಲೀಸರ ಎದುರೇ ಯುವಕರನ್ನು ಮಾರಣಾಂತಿಕ ಹಲ್ಲೆ ಮಾಡಿದ್ದು, ಇದರಿಂದ ಮುಸ್ಲಿಂ ಸಮುದಾಯಕ್ಕೆ ನೋವುಂಟಾಗಿದೆ. ಘಟನೆ ನಡೆದು ಮೂರುದಿನ ಕಳೆದರು ಮುಸ್ಲಿಂ ಯುವಕರ ಮೇಲೆ ನೈತಿಕ ಪೊಲೀಸಗಿರಿ ಮಾಡಿದ ಕಾಂಗ್ರೆಸ್ ಪಕ್ಷದ ಮುಖಂಡನ ಮೇಲೆ ಕಾನೂನು ಸುವ್ಯವಸ್ಥೆಯಾಗಲಿ ಪಕ್ಷವಾಗಲಿ ಯಾವದೇ ಕ್ರಮ ಕೈಗೊಳ್ಳದೇ ಇರುವದು ದುರಂತವೇ ಸರಿ. ಒಂದು ವೇಳೆ ಹಲ್ಲೆಮಾಡಿದವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಇದ್ದರೆ ಉಗ್ರಹೋರಾಟ ಹಮ್ಮಿಕೊಳ್ಳಲಾಗುವದು ಆಗ್ರಹಿದ್ದಾರೆ.