ಹುಕ್ಕೇರಿ; ಶ್ರೀ ಕ್ಷೇತ್ರ ಧರ್ಮಸ್ಥಳದ ಧಾರ್ಮಿಕ ಶ್ರದ್ದಾ ಕೇಂದ್ರದ ವಿರುಧ್ದ ಷಡ್ಯಂತ್ರ ನಡೆಸುತ್ತಿರುವ ವಿರುದ್ದ ಮಠಾಧೀಶರ ನೇತ್ರತ್ವದಲ್ಲಿ ಮಂಗಳವಾರ ಹುಕ್ಕೇರಿಯಲ್ಲಿ ಪ್ರತಿಭಟನೆ ನಡೆಯಿತು.
ನಿಡಸೋಸಿಯ ಸಿದ್ದ ಸಂಸ್ಥಾನಮಠದ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು, ಹುಕ್ಕೇರಿಹಿರೇಮಠದ ಚಂದ್ರಶೇಖರ ಶಿವಾಚಾರ್ಯಮಹಾಸ್ವಾಮಿಗಳು, ಹತ್ತರಗಿ ಗುರುಸಿದ್ದ ಮಹಾಸ್ವಾಮಿಗಳು, ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾಸ್ವಾಮಿಗಳು ನೇತ್ರತ್ವ ವಹಿಸಿದ್ದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಪಟ್ಟಣದ ಅಡವಿಸಿದ್ದೇಶ್ವರ ಮಠದಿಂದ ಬಸವ ವೃತ್ತದವರೆಗೆ ಪ್ರತಿಭಟಣೆಯ ಮೆರವಣಿಗೆ ನಡೆಸಿ ಧಾರ್ಮಿಕ ಶ್ರದ್ದಾ ಕೇಂz ಹಾಗೂ ಧರ್ಮಾದಿಕಾರಿ ವಿರೇಂದ್ರ ಹೆಗಡೆ ಅವರ ವಿರುದ್ದ ಅಪಪ್ರಚಾರ ಮಾಡುತ್ತಿರುವವರ ವಿರುದ್ದ ಘೋಷನೆ ಕೂಗಿದರು. ಅಪಪ್ರಚಾರ ನಡೆಸುತ್ತಿರುವ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಹಶಿಲ್ದಾರಿಗೆ ಮನವಿ ಸಲ್ಲಿಸಿದರು.
ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ವಿದ್ಯುತ್ ಸಹಕಾರಿ ಸಂಘಧ ನಿರ್ದೇಶಕ ಪೃಥ್ವಿ ಕತ್ತಿ, ವಿವಿಧ ಸಮಾಜದ ಮುಖಂಡರಾದ ಸತ್ಯಪ್ಪಾ ನಾಯಿಕ, ರಾಮಚಂದ್ರ ಜೋಶಿ, ಗುರು ಕುಲಕರ್ಣಿ, ಜೈನ ಸಮಾಜದ ತಾಲೂಕಾ ಅಧ್ಯಕ್ಷ ಬಾಹುಬಲಿ ನಾಗನೂರಿ, ಎ.ಕೆ ಪಾಟೀಲ, ಸುನೀಲ ಪರ್ವತರಾವ್, ಅಪ್ಪಾಸಾಹೇಬ ಸೂರ್ಯವಂಶಿ, ಅನ್ನಪ್ಪಾ ಖಾತೇದಾರ, ರಮೇಶ ಹುಂಜಿ, ಜನಜಾಗೃತಿ ಸಮಿತಿ ಜಿಲ್ಲಾ ಅದ್ಯಕ್ಷ ಶ್ರೀಪಾಲ ಮುನ್ನೋಳಿ, ಸಂಜು ನಿಲಜಗಿ ವಕೀಲರ ಸಂಘದ ಅಧ್ಯಕ್ಷ ಕಾಡಪ್ಪ ಕುರಬೇಟ ರಾಜು ಚೌಗಲಾ, ಕೆ.ಎಲ್ ಜಿನರಾಳಿ, ಆನಂದ ಲಕ್ಕುಂಡಿ, ಶಿವನಗೌಡ ಪಾಟೀಲ, ಪ್ರಬು ವಂಟಮೂರಿ, ವಿಧ್ಯಾದರ ಹರಾರಿ, ಪ್ರಜ್ವಲ ನಿಲಜಗಿ, ಕಾಡಪ್ಪ ಮಗದುಮ್ಮ, ಶ್ರೀದರ ಖತಗಲಿ, ಅಶೋಕ ಪಾಟೀಲ, ಶಿವರಾಜ ನಾಯಿಕ, ಸುಬಾಷ ನಾಯಿಕ, ರೋಹನ ಬಸ್ತವಾಡೆ, ಜಿನ್ನಪ್ಪಾ ಚೌಗಲಾ, ವಿರೇಶ ಗಜಬರ, ರೂಪಾ ಬಾಳಿಕಾರ, ಶೋಭಾ ಕಮತೆ, ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
ಪೋಟೋ ಶಿರ್ಷಿಕೆ ೧೯ ಹುಕ್ಕೇರಿ-೦೧
ಹುಕ್ಕೇರಿಯಲ್ಲಿ ಮಠಾಧೀಶರ ನೇತ್ರತ್ವದಲ್ಲಿ ಸರ್ವಧರ್ಮಿಯರ ವಿವಿಧ ಸಂಘಟನೆಗಳಿಂದ ಮಳೆಯಲ್ಲಿ ಭಕ್ತಿ ಶ್ರದ್ದಾಕೇಂದ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುತ್ತಿರುವದನ್ನು ಖಂಡಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಹುಕ್ಕೇರಿ ಮಠಾಧೀಶರ ನೇತ್ರತ್ವದಲ್ಲಿ ಸರ್ವಧರ್ಮಿಯರ ಸಂಘಟನೆಗಳಿಂದ ಪ್ರತಿಭಟಣೆ.
