ಜನ ಸಾಮಾನ್ಯರೂ ಇಂದಿರಾ ಕ್ಯಾಂಟಿನ್ ಸೌಲಭ್ಯ ಪಡೆಯುವಂತಾಗಲಿ : ಲಕ್ಕಣ್ಣ ಸವಸುದ್ದಿ

Pratibha Boi
ಜನ ಸಾಮಾನ್ಯರೂ ಇಂದಿರಾ ಕ್ಯಾಂಟಿನ್ ಸೌಲಭ್ಯ ಪಡೆಯುವಂತಾಗಲಿ : ಲಕ್ಕಣ್ಣ ಸವಸುದ್ದಿ
Oplus_16908290
WhatsApp Group Join Now
Telegram Group Join Now

ಮೂಡಲಗಿ : ಇಂದಿರಾ ಕ್ಯಾಂಟಿನ್ ರಾಜ್ಯ ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದಾಗಿದ್ದು, ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಊಟ ಹಾಗೂ ಉಪಹಾರದ ಸೌಲಭ್ಯಗಳನ್ನು ಈ ಭಾಗದ ಜನ ಸಾಮಾನ್ಯರು ಪಡೆದುಕೊಳ್ಳಬೇಕೆಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಮನವಿ ಮಾಡಿದರು.
ಮಂಗಳವಾರದಂದು ಪಟ್ಟಣದ ಸರ್ಕಾರಿ ಆಸ್ಪತ್ರೆ ಹತ್ತಿರ ಇತ್ತೀಚೆಗ? ಪ್ರಾರಂಭವಾದ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿ ಮಾತನಾಡಿದ ಅವರು, ಕ್ಯಾಂಟಿನ್ ಸಿಬ್ಬಂದಿಯೊಂದಿಗೆ ಚರ್ಚಿಸಲಾಗಿ ಸಧ್ಯಕ್ಕೆ ಸರ್ಕಾರದಿಂದ ಈ ಕ್ಯಾಂಟಿನ್ ನಲ್ಲಿ ಗ್ರಾಹಕರಿಗೆ ದಿನಕ್ಕೆ ೩೦೦ ಪ್ಲೇಟ್ ಊಟೋಪಹಾರ ಒದಗಿಸುವ ಗುರಿಯಿದ್ದು ಇನ್ನೂ ಹೆಚ್ಚಿನ ಬೇಡಿಕೆಯಿದೆ. ಆದ? ಬೇಗ ಸಂಬಂಧಪಟ್ಟ ಮೇಲಿನ ಅಧಿಕಾರಿಗಳ ಜೊತೆ ಮಾತನಾಡಿ ದಿನಕ್ಕೆ ೫೦೦ಪ್ಲೇಟ್ ವರೆಗೆ ಸೌಲಭ್ಯ ಒದಗಿಸುವ ಕುರಿತು ಮನವಿ ಮಾಡಲಾಗುವುದು ಎಂದರು. ಕ್ಯಾಂಟೀನ್ ಸಿಬ್ಬಂದಿಗೆ ಶುಚಿ ರುಚಿ ಜೊತೆ ಗುಣಮಟ್ಟ ಸುಧಾರಿಸುವ ಕುರಿತು ಕಿವಿಮಾತು ಹೇಳಿದ ಸವಸುದ್ದಿಯವರು ನಂತರ ಪಟ್ಟಣದ ಭಾಜೀ ಮಾರ್ಕೆಟ್ ನಲ್ಲಿ ನಿರ್ಮಾಣವಾಗುತ್ತಿರುವ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಮಹಾಲಿಂಗಯ್ಯ ನಂದಗಾಂವಮಠ, ಸದಾಶಿವ ಮುರಗೋಡ, ವಿಠ್ಠಲ್ ಸುಲ್ತಾನಪೂರ, ಅನೇಕ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

 

 

WhatsApp Group Join Now
Telegram Group Join Now
Share This Article