ನೇಸರಗಿ: ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಪ್ರತಿವರ್ಷ ಪದ್ಧತಿಯಂತೆ ಶ್ರೀ ಜಡಿ ಸಿದ್ದೇಶ್ವರ ಮಠದ ಕೊನೆಯ ಶ್ರಾವಣ ಮಾಸದ ಸೋಮವಾರದಂದು ಜಾತ್ರಾ ಮಹೋತ್ಸವ ಜರುಗಿತು.
ಸೋಮವಾರದಂದು ಬೆಳಿಗ್ಗೆ ಶ್ರೀ ಜಡೆ ಸಿದ್ದೇಶ್ವರನ ಕರ್ತೃ ಗದ್ದಿಗೆ ಮಹಾ ರುದ್ರಾಭಿಷೇಕ ನಡೆಯಿತು, ಹಾಗೂ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಉತ್ಸವವು ಜರುಗಿತು. ಮಧ್ಯಾಹ್ನ ಮಹಾಪ್ರಸಾದ ಸೇವೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಬಸಯ್ಯ ಹಿರೇಮಠ, ತಮ್ಮಯ್ಯ ಹಿರೇಮಠ, ಕಾರ್ತಿಕ ಹಿರೇಮಠ,ರುದ್ರಪ್ಪ ಕಲ್ಲನ್ನವರ, ಮಹಾಂತೇಶ ಬಡಿಗೇರ,ಈರಪ್ಪ ಕಲ್ಲನ್ನವರ,ಯಲ್ಲನಗೌಡ ಮಾಳನಾಯ್ಕರ, ರಮೇಶ್ ಬಡಿಗೇರ,ಮುದುಕಪ್ಪ ನೇಸರಗಿ, ಬಸವರಾಜ ಬಡಿಗೇರ,ಬಸವರಾಜ್ ಕುರಗುಂದ, ನಿಂಗಪ್ಪ ನಾವಿ, ನಾರಾಯಣ ಮಿರೇಜ್ಕರ,
ಫಕೀರಗೌಡ ಪಾಟೀಲ ಹಾಗೂ ಊರಿನ ಗ್ರಾಮಸ್ಥರು ಹಾಗೂ ಗುರು ಹಿರಿಯರು ಹಾಗೂ ಜಡಿಸಿದ್ದೇಶ್ವರ ಸಕಲ ಸದ್ಭಕ್ತ ಮಂಡಳಿ ಭಾಗವಹಿಸಿದ್ದರು.