ಪಾಲಕರು ಮಕ್ಕಳ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಕೊಡಿ : ಬಾಬಾಸಾಹೇಬ ಪಾಟೀಲ 

Ravi Talawar
ಪಾಲಕರು ಮಕ್ಕಳ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಕೊಡಿ : ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now

 

ನೇಸರಗಿ. ಮಕ್ಕಳ ಭವಿಷ್ಯಕ್ಕೆ ಪಾಲಕರು ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಪಡೆದು, ಮಕ್ಕಳ ಮುಂದಿನ ಜೀವನದ ಬಗ್ಗೆ ಮೊದಲು ಸರ್ಕಾರಿ ಅಂಗನವಾಡಿ, ಸರ್ಕಾರಿ ಪ್ರಾಥಮಿಕ, ಮುರಾರ್ಜಿ ದೇಸಾಯಿ, ನವೋದಯ ಇನ್ನೂ ಅನೇಕ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಊಟ, ವಸತಿ ಸಿಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಿ ಎಂದು     ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
    ಅವರು ಸಮೀಪದ ದೇಶನೂರ ಗ್ರಾಮದಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ  ಅಂಗನವಾಡಿ ಶಾಲಾ ನೂತನ  ಕಟ್ಟಡ ಮತ್ತು ಸ್ಮಾರ್ಟ್ ಕ್ಲಾಸ  ಉದ್ಘಾಟನೆ ನೆರವೇರಿಸಿ ಮಾತನಾಡಿದರು.
   ಈ ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ದೀಪಕಗೌಡ ಪಾಟೀಲ, ಗ್ರಾ. ಪಂ ಉಪಾಧ್ಯಕ್ಷರಾದ ಅಬ್ಬಾಸ ಅಲಿ  ಫೀರಜಾದೆ, ಅಡಿವಪ್ಪ ಮಾಳಣ್ಣವರ, ಯುವ ಮುಖಂಡ ಸಚಿನ ಪಾಟೀಲ,ಬಸವರಾಜ ಬಾವಿಕಟ್ಟಿ,   ಶಿಶು ಅಭಿವೃದ್ಧಿ ತಾಲೂಕಾ ಯೋಜನಾಧಿಕಾರಿ ಎಸ್ ಬಿ ಅರುಣಕುಮಾರ, ಎಇಇ ಮಹೇಶ ಹೊಲಿ,ಬಸವರಾಜ ಕಳಸಣ್ಣವರ, ಚನಗೌಡ ಪಾಟೀಲ,ಮಲ್ಲಿಕಾರ್ಜುನ ಕಲ್ಲೋಳಿ ,ಪ್ರಕಾಶ ಮುಂಗರವಾಡಿ,ಶ್ಯಾನ ರಾಮಣ್ಣವರ, ಸದೆಪ್ಪ ಕಮತಗಿ, ಅಲ್ತಾಪ್ ಅಲನ, ಕಾಶೀನಾಥ ಹಿರೇಮಠ, ಚೇತನ ಪಟ್ಟಣಶೆಟ್ಟಿ, ಈರಣ್ಣ ಶೆಟ್ಟರ, ಡಾ. ಶಶಿಧರ ಬಾಗಲಕೋಟಿ, ಅಯೂಬ್ ಗಣಾಚಾರಿ, ಕಾರ್ಯದರ್ಶಿ ಮಹಾಂತೇಶ ಗಾಣಗಿ, ಸೇರಿದಂತೆ, ಅಂಗನವಾಡಿ ಅಧಿಕಾರಿಗಳು, ಶಿಕ್ಷಕರು, ಕಾರ್ಯಕರ್ತರು, ಮಕ್ಕಳು, ಎಲ್ಲ ಸಮಾಜದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article