ನೇಸರಗಿ.ಕಿತ್ತೂರು ಕ್ಷೇತ್ರದ ಶಿಕ್ಷಣಕ್ಕೆ ಹೆಚ್ಚಿನ ಅನುಧಾನ ನೀಡಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಶಿಕ್ಷಣದಿಂದ ಎಲ್ಲರು ಬೆಳೆದು ಮುಂದೆ ಬರಲು ಸಾಧ್ಯ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಸಮೀಪದ ಮಲ್ಲಾಪೂರ ಕೆ ಎನ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಮಾರ್ಟ್ ಕ್ಲಾಸ ಉದ್ಘಾಟನೆ ನೇರವೇರಿಸಿ ಮಾತನಾಡಿ ಹೂವು, ಹಾರಗಳಿಂದ ಪ್ರಯೋಜನ ಇಲ್ಲಾ, ಅದರ ಬದಲಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವನಗೌಡ ಪಾಟೀಲ, ಗ್ರಾ ಪಂ ಅಧ್ಯಕ್ಷ ಅಶೋಕ ವಕ್ಕುಂದ,ಅಡಿವಪ್ಪ ಮಾಳಣ್ಣವರ, ಯುವ ಮುಖಂಡ ಸಚಿನ ಪಾಟೀಲ,ನಾಗಪ್ಪ ಸುಳ್ಳದ, ನಾಗಪ್ಪ ಬೂದಿಗೊಪ್ಪ, ಗೌಡಪ್ಪ ಶಿವಬಸನವರ, ರುದ್ರಗೌಡ ಪಾಟೀಲ, ಎಸ್ ಡಿ ಎಮ್ ಸಿ ಅಧ್ಯಕ್ಷ ಶ್ರೀಮತಿ ರೇಖಾ ಚಿಕ್ಕಬಸನವರ,ಮುಕ್ಯೋಪಾಧ್ಯಾಯರಾದ ಪಿ ಬಿ ದೇಶನೂರ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.